RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

ಹಾಸನ: ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬರುವುದಿಲ್ಲ ಎಂದು ಜೆಡಿಎಸ್ ಬಗ್ಗೆ ಪ್ರೀತಂಗೌಡ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಹಾಸನದಲ್ಲಿ ಪ್ರೀತಂಗೌಡ ಅವರು ಉಪಚುನಾವಣೆ ಕುರಿತು ಮಾತನಾಡಿದ್ದು, ಉಪಚುನಾವಣೆ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್, ಕ್ಯಾಂಡಿಡೇಟ್ ಹೋಗಿದ್ದರು. ಒಬ್ಬೊಬ್ಬರಿಗೆ ಒಂದು ಸಾವಿರ ವೋಟು ಎಂದರೂ ಆರು ಸಾವಿರ ವೋಟು ಬರಬೇಕಿತ್ತು. ಅಲ್ಲಿ ಐದು ಸಾವಿರ ವೋಟು ಕ್ರಾಸ್ ಆಗಿಲ್ಲ ಎಂದು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ

ಬಿಜೆಪಿ ಪಕ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ ಎಂಬ ರೇವಣ್ಣ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಾದೇಶಿಕ ಪಕ್ಷ ಸದೃಢವಾಗಿರಲಿ ಎಂದು ಆಶಿಸುವುದರಲ್ಲಿ ನಾನೂ ಒಬ್ಬ. ಪ್ರಾದೇಶಿಕ ಪಕ್ಷ ಇರಬೇಕು ನಾಡಿನ ಬಗ್ಗೆ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು ಎಂದು ಸಲಹೆ ಕೊಡುತ್ತೇನೆ. ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ಪಕ್ಷ ಎಂದರೆ ಬಿಜೆಪಿ. ಇವರ ಹತ್ರ ಇರೋದು 40 ಶಾಸಕರು. ಇವರು ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡ್ತಾರೆ ಎಂದು ಹೇಳಿದರೆ ಅದರ ರಿಸಲ್ಟ್ ಹಾನಗಲ್ ಮತ್ತು ಸಿಂಧಗಿಯಲ್ಲಿ ನೋಡಿದ್ದೀರಿ ಎಂದು ಟಾಂಗ್ ಕೊಟ್ಟಿದ್ದಾರೆ.


ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬಾರದು. ಯಾವತ್ತೂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮಾತನಾಡಿದರೋ, ಜನ ತೀರ್ಮಾನ ಮಾಡಿದರು. ಇವರು ರಾಜಕಾರಣದಲ್ಲಿ ಯಾವ ಮಟ್ಟಕ್ಕಾದರೂ ಹೋಗ್ತಾರೆ. ಇವರಿಗೆ ಬುದ್ಧಿ ಕಲಿಸಲು ಸೂಕ್ತ ಸಮಯ ಎಂದು ಹೇಳಿ ಅವರಿಗೆ ಆ ಮತವನ್ನು ಕೊಟ್ಟಿದ್ದಾರೆ. ಗೆದ್ದಂತಹ ಕ್ಷೇತ್ರದಲ್ಲಿ ಐದು ಸಾವಿರ ವೋಟನ್ನು ಉಳಿಸಿಕೊಳ್ಳಲು ಜೆಡಿಎಸ್‍ಗೆ ಆಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

Comments

Leave a Reply

Your email address will not be published. Required fields are marked *