ಬೆಂಗಳೂರು ವಿವಿಯಲ್ಲಿ ಹೊಸ 30 ಕೋರ್ಸ್ ಆರಂಭ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾಲಯ 30 ಹೊಸ ಕೋರ್ಸ್‍ಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾಖಲಾತಿಗೂ ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ಹೊಸ ಕೋರ್ಸ್‍ಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳು, ಪ್ರೊಫೆಷನ್ ಡಿಪ್ಲೊಮಾ ಕೋರ್ಸ್‍ಗಳು, ಪ್ರಮಾಣ ಪತ್ರ ಕೋರ್ಸ್‍ಗಳು, ನಾಲ್ಕು ವರ್ಷದ ಬಿ.ಇಡಿ ಹಾಗೂ ಕೆಲವೊಂದು ತಾಂತ್ರಿಕ ಕೋರ್ಸ್‍ಗಳು ಸೇರಿಕೊಂಡಿವೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್

ಕುಲಪತಿ ಕೆ.ಆರ್.ವೇಣುಗೋಪಾಲ್ ಈ ಕುರಿತು ಮಾತನಾಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಂಡ ನಂತರ ಉದ್ಯೋಗಾವಕಾಶಕ್ಕೆ ಪೂರಕವಾಗುವಂತೆ ಹಾಗೂ ಪದವಿಯ ಮಧ್ಯದಲ್ಲೇ ಎಕ್ಸಿಟ್, ಎಂಟ್ರಿಗೆ ಅನುಕೂಲ ಆಗುವಂತೆ ಕೋರ್ಸ್‍ಗಳ ಪಠ್ಯಕ್ರಮ ಸಿದ್ಧಪಡಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಕೋರ್ಸ್‍ಗಳ ವಿವರ: ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಅಡಿಯಲ್ಲಿ ಬಯೋ ಇನ್ಫರ್ಮೇಷನ್ ಮತ್ತು ಬಯೋಟೆಕ್ನಾಲಜಿ, ಹ್ಯೂಮನ್ ಡಿಸೀಸ್ ಜೆನೆಟಿಕ್ಸ್, ಆಹಾರ ಮತ್ತು ಪೌಷ್ಠಿಕಾಂಶ, ಅರ್ಥಶಾಸ್ತ್ರ, ಘನತಾಜ್ಯ ನಿರ್ವಹಣೆ, ಫಿಲ್ಮ್ ಮೇಕಿಂಗ್, ಗ್ರಾಫಿಕ್ಸ್ ಮತ್ತು ಆ್ಯನಿಮೇಷನ್, ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್, ವಿಪತ್ತು ನಿರ್ವಹಣೆ ಮತ್ತು ಮೆಡಿಸಿನಲ್ ಬಾಟನಿ ಪ್ರಾರಂಭಿಸಲಾಗುವುದು.

ಎಂ.ಎ ವಿಭಾಗದಲ್ಲಿ ಟಿಬೆಟಿಯನ್ ಲಿಟರೇಚರ್, ಟಿಬೆಟಿಯನ್ ಲ್ಯಾಂಗ್ವೇಜ್, ಬುದ್ಧಿಸ್ಟ್ ಫಿಲಾಸಫಿ, ಟಿಬೆಟಿಯನ್ ಇತಿಹಾಸ, ಇಂಟರ್‍ಡಿಸಿಪ್ಲಿನರಿ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರಿಸರ್ಚ್, ಅಡ್ವರ್ಟೈಸಿಂಗ್ ಆಂಡ್ ಪಬ್ಲಿಕ್ ರಿಸರ್ಚ್, ಮೀಡಿಯಾ ಮ್ಯಾನೇಜ್ಮೆಂಟ್ ಕೋರ್ಸ್‍ಗಳು ಆರಂಭವಾಗಲಿವೆ. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಡಿಯಲ್ಲಿ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ, ಇಂಟರ್‍ಡಿಸಿಪ್ಲಿನರಿ ಸ್ಟಡೀಸ್ ಇನ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಆಡಿಟರಿ ವರ್ಬಲ್ ಥೆರಪಿ ಕೋರ್ಸ್, ಫಿಲ್ಮ್ ಆಕ್ಟಿಂಗ್, ಥಿಯೇಟರ್ ಆಟ್ರ್ಸ್, ಫಿಲ್ಮ್ ಮೇಕಿಂಗ್, ಕೃಷಿ ನಿರ್ವಹಣೆ, ಪ್ರೊಫೆಷನ್ ಡಿಪ್ಲೊಮಾ ವಿಭಾಗದಲ್ಲಿ ಭರತನಾಟ್ಯಂ, ಒಡಿಸ್ಸಿ, ಪ್ರಮಾಣಪತ್ರ ಕೋರ್ಸ್‍ನಲ್ಲಿ ರಿಸರ್ಚ್ ಮೆಥಡ್ ಇನ್ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಟೆಕ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಸುಸ್ಥಿರ ಆರ್ಕಿಟೆಕ್ಚರ್, ಇಂಟರ್‍ನೆಟ್ ಆಫ್ ಥಿಂಗ್ಸ್ ಕೋರ್ಸ್‍ಗಳು ಶುರುವಾಗಲಿದೆ.

Comments

Leave a Reply

Your email address will not be published. Required fields are marked *