ಲೋಹಿತ್ ಅಲ್ಪಾಯುಷ್ಯವೆಂದು ಪುನೀತ್ ಅಂತ ಹೆಸ್ರು ಚೇಂಜ್ ಮಾಡಲಾಗಿತ್ತು: ಕುಮಾರ್ ಬಂಗಾರಪ್ಪ

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖವನ್ನು ಶಾಸಕ ಕುಮಾರ್ ಬಂಗಾರಪ್ಪ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ಲೋಹಿತ್ ಆಗಿದ್ದವರು, ಅಪ್ಪು ಆಗಿರುವ ಕುರಿತಾಗಿ ಹೇಳಿಕೊಂಡಿದ್ದಾರೆ.

ಅಪ್ಪು ಅಂತ್ಯಕ್ರಿಯೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪು ಬಾಲ್ಯದ ಹೆಸರು ಲೋಹಿತ್ ಆಗಿತ್ತು. ಹರಿಶ್ಚಂದ್ರ ನಾಟಕದಲ್ಲಿ ಲೋಹಿತನಿಗೆ ಅಲ್ಪ ಆಯುಷ್ಯ ಇರೋದ್ರಿಂದ ಮನೆಗಳಲ್ಲಿ ಸ್ವಲ್ಪ ಅಪಸ್ವರ ಇತ್ತು. ಹಿರಿಯರು ಕೂಡ ಹೆಸರು ಚೇಂಜ್ ಮಾಡಬೇಕು ಅಂದಿದ್ದರು. ಹೀಗಾಗಿ ಜ್ಯೋತಿಷ್ಯಗಳ ಸಲಹೆ ಮೆರೆಗೆ ಹೆಸರು ಬದಲಾವಣೆ ಮಾಡಲಾಯಿತ್ತು. ಹಿರಿಯರು ಆಡಿದ ಮಾತು ನನ್ನ ಕಿವಿಗೂ ಬಿದ್ದಿತ್ತು. ಲೋಹಿತ್ ಬೇಡ ಅಂತಾ ಪುನೀತನಾಗ್ಲಿ ಅಂತಾ ಪುನೀತ್ ರಾಜ್ ಕುಮಾರ್ ಅಂತಾ ಹೆಸರಿಟ್ಟರು. ಆದರೆ ಲೋಹಿತಾಶ್ವ ನಾಗಲಿ ಪುನೀತನಾಗಲಿ ವಿಧಿಯಾಟವೇ ಬೇರೆ ಇತ್ತು ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ:   ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರ ಸಲಹೆ ಮೇರೆಗೆ ಹೆಸರು ಬದಲಾವಣೆ ಮಾಡಲಾಯಿತ್ತು. ಮೈಸೂರು ರಸ್ತೆಯ ಫಾರ್ಮ್ ಹೌಸ್ ಹೆಸರು ಸಹ ಲೋಹಿತ್ ಅಂತಲೇ ಇತ್ತು. ಲೋಹಿತ್ ಹೆಸರನ್ನ ಪುನೀತ್ ಎಂದು ಬದಲಾದ ನಂತರ ಫಾರ್ಮ್ ಹೌಸ್ ಹೆಸರನ್ನ ಸಹ ಪುನೀತ್ ಫಾರ್ಮ್ ಹೌಸ್ ಅಂತಾ ಚೇಂಜ್ ಮಾಡಲಾಯಿತ್ತು. ಮಯೂರ ಚಿತ್ರದ ಮಲ್ಲಯುದ್ಧದ ಸಂದರ್ಭದಲ್ಲಿ ಅಪ್ಪು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅಪ್ಪು ಮತ್ತು ರಜನಿ ಒಂದೇ ಸಮಯಕ್ಕೆ ಚಿತ್ರ ರಂಗ ಪ್ರವೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *