ಬೆಂಗಳೂರು: ನಟ ಪುನೀತ್ ಅವರ ಅಂತ್ಯಕ್ರಿಯೆ ಭಾನುವಾರ ಮುಂಜಾನೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವ ಗಳೊಂದಿಗೆ ನೆರವೇರಿತು. ಈ ವೇಳೆ ಮಾತನಾಡಿದ ರಮೇಶ್ ಅರವಿಂದ್ ಅವರು ಪುನೀತ್ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡು ದುಃಖವನ್ನು ತೋಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ರಮೇಶ್ ಅರವಿಂದ್ ಅವರು, ಪುನೀತ್ ಹಾಗೂ ಮಗಳ ಭಾಂದವ್ಯದ ಕುರಿತಾಗಿ ಮಾಡತನಾಡಿದ್ದಾರೆ. ಗುರುಕಿರಣ್ ಬರ್ತಡೆ ಪಾರ್ಟಿಯಲ್ಲಿ ಮಗಳ ವಿಚಾರವಾಗಿ ಅನೇಕ ಬಾರಿ ಹೇಳಿಕೊಂಡಿದ್ದರು. ಮಗಳು ಮಲಗಿಬಿಡ್ತಾಳೆ, ನಾನು ಹೋತ್ತೇನೆ ಅವಳನ್ನು ನೈಟ್ ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗ್ ಬೇಕು ಎಂದು ತರಾತುರಿಯಲ್ಲಿ ಹೊರಟಿದ್ದರು. ಆದರೆ ಅಪ್ಪು ಬರುವಷ್ಟರಲ್ಲಿ ಮಗಳು ನಿದ್ದೆಗೆ ಜಾರಿದ್ದರು. ಸಾವಿನ ಮೊದಲ ದಿನ ಅಪ್ಪನ ಜೊತೆ ನೈಟ್ ವಾಕಿಂಗ್ ಮಿಸ್ ಮಾಡಿಕೊಂಡಿದ್ದರು. ಪುನೀತ್ ಕೊನೆ ಮಗಳಿಗೆ ಕಾಡುತ್ತಿದೆ ಆ ನೆನಪು, ಇದನ್ನು ತಾಯಿಯ ಬಳಿ ಪದೇ ಪದೇ ಹೇಳಿಕೊಂಡು ಕಣ್ಣೀರು ಇಡುತ್ತಾ ಇದ್ದಾಳೆ ಎಂದು ರಮೇಶ್ ಅರವಿಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ಕ್ರಿಪ್ಟೋ ಕರೆನ್ಸಿ ಸೇರಿದಂತೆ ಸಿನಿಮಾ ಬಗ್ಗೆ ಮಾತನಾಡಿದ್ದರು. ಅವರು ಅಭಿನಯಿಸಿದ ಡಾಕ್ಯುಮೆಂಟರಿ ಗಂಧದ ಗುಡಿ ಕುರಿತಾಗಿ ವೀಡಿಯೋ ಕೂಡ ತೋರಿಸಿದ್ದರು ಎಂದು ರಮೇಶ್ ಅರವಿಂದ್ ಅವರು ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ: 2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

Leave a Reply