ಪಬ್ಲಿಕ್ ಟಿವಿ ಮೆಗಾ ರಿಯಲ್ ಎಸ್ಟೇಟ್ ಎಕ್ಸ್‌ಪೋ ‘ನಮ್ಮ ಮನೆ’ಗೆ ಚಾಲನೆ

ಬೆಂಗಳೂರು: ಪಬ್ಲಿಕ್ ಟಿವಿ ಮೆಗಾ ರಿಯಲ್ ಎಸ್ಟೇಟ್ ಎಕ್ಸ್‌ಪೋ ‘ನಮ್ಮ ಮನೆ’ಗೆ ಚಾಲನೆ ಸಿಕ್ಕಿದೆ. ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್ ಆರ್, ಪ್ರಗತಿ ಅಡ್ವಟೈಜರ್ಸ್ ಎಂಡಿ ಎಚ್.ಎನ್,ಯೋಗೇಶ್, ಶ್ರೀ ಧತ್ರಿ ಡೆವೆಲಪರ್ಸ್ ಆಂಡ್ ಪ್ರಮೋಟರ್ಸ್‍ನ ಎಂಡಿ ಮಂಜುನಾಥ್ ಬಿ, ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್‍ನ ಎಂಡಿ ಡಾ.ಎಸ್.ಪಿ.ದಯಾನಂದ್, ರಾಯಲ್ ಪ್ರಾಪರ್ಟಿಸ್ ಎಂಡಿ ರಘುರಾಮಾ ಕೃಷ್ಣಪ್ಪ, ಲೋಟಸ್ ವೆಂಚರ್ಸ್‍ನ ಎಂಡಿ ರಾಕೇಶ್ ಶರ್ಮಾ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

`ಶ್ರೀದತ್ರಿ ಡೆವಲಪರ್ಸ್’ ಸಹಯೋಗದಲ್ಲಿ ಇಂದು ಮತ್ತು ನಾಳೆ ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಎಕ್ಸ್‌ಪೋ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಯ ಅನುಮೋದಿತ ಸೈಟ್, ಫ್ಲ್ಯಾಟ್, ಅಪಾರ್ಟ್‍ಮೆಂಟ್, ವಿಲ್ಲಾ ಸೇರಿದಂತೆ ಬಿಲ್ಡರ್ಸ್ ಕಂಪನಿಗಳು, ಡಿಸೈನ್ ಕಂಪನಿಗಳು ಮತ್ತು ಸಾಲಸೌಲಭ್ಯದ ಕುರಿತಾದ ಮಾಹಿತಿ `ನಮ್ಮ ಮನೆ’ ಎಕ್ಸ್‌ಪೋದಲ್ಲಿ ಸಿಗಲಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ರಿಯಲ್‌ ಎಸ್ಟೇಟ್‌ ಎಕ್ಸ್‌ಪೋಗೆ ನಾಳೆ ಚಾಲನೆ

ಮೆಗಾ ರಿಯಲ್ ಎಸ್ಟೇಟ್ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ ಇರಲಿದೆ. ಅಷ್ಟೇ ಅಲ್ಲದೆ, ಎಕ್ಸ್‌ಪೋದಲ್ಲಿ ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಗಿಫ್ಟ್ ಕೂಡ ಸಿಗಲಿದೆ. ಕನ್‍ಸ್ಟ್ರಕ್ಷನ್ ಕಂಪನಿಗಳು, ಲ್ಯಾಂಡ್ ಡೆವಲಪರ್ಸ್, ಹಣಕಾಸು ಸಂಸ್ಥೆಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು, ಸ್ಯಾನಿಟರಿ ಫಿಟ್ಟಿಂಗ್, ಒಳಾಂಗಣ ವಿನ್ಯಾಸ ಕಂಪನಿಗಳು, ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು ಕೂಡ ಈ ಎಕ್ಸ್ ಪೋದಲ್ಲಿ ಭಾಗಿಯಾಗುತ್ತಿವೆ. ಕೊರೊನಾ ರೂಲ್ಸ್ ಪಾಲನೆಯೊಂದಿಗೆ ಎಕ್ಸ್‌ಪೋ ನಡೆಯುತ್ತಿದೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

Comments

Leave a Reply

Your email address will not be published. Required fields are marked *