ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

Oh My Love

ಸುಪ್ರೀಂ ಸ್ಟಾರ್ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದ್ದೂರಿಯಾಗಿ ಬಹು ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್‌ಗೆ ಜೋಡಿಯಾಗಿ ಕೀರ್ತಿ ಕಲ್ಕೆರೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನವ ಹಾಗೂ ಅನುಭವಿ ಕಲಾವಿದರ ಬಳಗ ಇರುವ ಸಿನಿಮಾ ತಂಡ ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

 Oh My Love

ಜಿಸಿಬಿ ಪ್ರೊಡಕ್ಷನ್ಸ್ ಲಾಂಚನದಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಿ. ರಾಮಾಂಜಿನಿ ಚೆಂದದ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸ್ಮೈಲ್ ಶ್ರೀನು ಜಿ ರಾಮಾಂಜಿನಿ ಅವರ ಕಥೆಗೆ ಚಿತ್ರಕತೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಲವ್ ಸಬ್ಜೆಕ್ಟ್ ಸಿನಿಮಾ ‘ಓ ಮೈ ಲವ್’. ಇದರ ಜೊತೆಗೆ ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸದ್ಯ ಚಿತ್ರತಂಡ ಚಿತ್ರದ ಬಹು ನಿರೀಕ್ಷಿತ ‘ಏನಾಯ್ತೋ ಕಾಣೆ’ ಹಾಡಿನ ಚಿತ್ರೀಕರಣ ಮುಗಿಸಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

 Oh My Love

ಖ್ಯಾತ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಲ್ಲಿ ‘ಏನಾಯ್ತೋ ಕಾಣೆ’ ಹಾಡಿನ ಸಾಲುಗಳು ಸೊಗಸಾಗಿ ಮೂಡಿ ಬಂದಿದ್ದು ಅಷ್ಟೇ ಸೊಗಸಾಗಿ ಡಾನ್ಸ್ ಮಾಸ್ಟರ್ ಮುರಳಿ ನೃತ್ಯ ನಿರ್ದೇಶನದ ಮಾಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಈ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ನಡೆದಿದ್ದು, ಅಕ್ಷಿತ್ ಶಶಿಕುಮಾರ್. ನಾಯಕಿ ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಅಕ್ಷತಾ ಶೌರ್ಯ, ಸುವೇದ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:  ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

 Oh My Love

ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಏನಾಯ್ತೋ ಕಾಣೆ ಸಾಂಗ್ ಹೊರತು ಪಡಿಸಿ ಇನ್ನೂ ಮೂರು ಹಾಡಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಇದು ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದೆ. ಎಸ್. ನಾರಾಯಣ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ತೆಲುಗು ಖ್ಯಾತ ನಟ ದೇವ್ ಗಿಲ್ ಸೇರಿದಂತೆ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾವ್‍ಕುಮಾರ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚರಣ್ ಅರ್ಜುನ್ ಸಂಗೀತ ಸಂಯೋಜನೆ, ಹಾಲೇಶ್ ಎಸ್ ಕ್ಯಾಮೆರಾ ವರ್ಕ್, ಡಿ. ಮಲ್ಲಿ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

Comments

Leave a Reply

Your email address will not be published. Required fields are marked *