ಹಿಂದೂಗಳಿಗೆ ಮಾತ್ರ ಸೌಲಭ್ಯ ಸಾಬೀತಾದ್ರೆ ರಾಜಕೀಯ ನಿವೃತ್ತಿ- ಕಾಂಗ್ರೆಸ್ಸಿಗೆ ಬಿಎಸ್‍ವೈ ಸವಾಲ್

ವಿಜಯಪುರ: ಹಿಂದೂಗಳಿಗೆ ಮಾತ್ರ ಸೌಲಭ್ಯ ಮಾಡಿದ್ದೇನೆ ಅಂತ ಕಾಂಗ್ರೆಸ್ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೀತೀನಿ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ವಿಜಯಪುರದ ಸಿಂದಗಿಯಲ್ಲಿ ಇಂದು ಬೃಹತ್ ರ್ಯಾಲಿ ನಡೆಸಿದ್ರು. ಗೋಲಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಪರವಾಗಿ ಪ್ರಚಾರ ಮಾಡುವಾಗ ಮುಸ್ಲಿಮರ ಪರವಾಗಿ ಬ್ಯಾಟ್ ಬೀಸಿದ್ದಾರೆ. ನಮಗೆ ಹಿಂದೂ ವೋಟುಗಳೇ ಸಾಕು, ಮುಸ್ಲಿಮರ ವೋಟು ಬೇಡ ಅಂತ ಬಿಜೆಪಿಗರು ಹೇಳ್ತಿರುವಾಗಲೇ ಮಾಜಿ ಸಿಎಂ ಮುಸ್ಲಿಮರ ಜಪ ಮಾಡಿದ್ದಾರೆ.

ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಹಿಂದು, ಮುಸ್ಲಿಂ, ಕ್ರೈಸ್ತ ಸಮಾಜ ಎಲ್ಲರು ಒಟ್ಟಿಗೆ ಹೋಗಬೇಕು. ಮೋದಿ, ನಾವು ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡಿರುವ ಒಂದು ಉದಾಹರಣೆ ಇದ್ರೆ ಕೊಡಿ. ಆದರೂ ಮುಸ್ಲಿಂ ಬಂಧುಗಳು ನಮ್ಮಿಂದ ದೂರ ನಿಂತಿದ್ದೀರಿ. ಈ ಬಾರಿ ಬಿಜೆಪಿಗೆ ಮುಸ್ಲಿಂ ಬಾಂಧವರು ಭೂಸನೂರಗೆ ಮತ ಹಾಕಬೇಕು ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

ಭೂಸನೂರ ಗೆದ್ದರೆ ಸಿಂದಗಿಯನ್ನು ಅಭಿವೃದ್ಧಿ ಮಾಡ್ತೇನೆ. ಬೆಂಗಳೂರಿಗೆ ಬಂದ್ರೆ ಸಂಕೋಚ ಮಾಡದೆ ಕಾವೇರಿ ನಿವಾಸಕ್ಕೆ ಬನ್ನಿ ಅಂತ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

Comments

Leave a Reply

Your email address will not be published. Required fields are marked *