ಪ್ರಿನ್ಸ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ರಾಜಮೌಳಿ

ಚೆನ್ನೈ: ಎಸ್.ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಸ್ಟಾರ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಾಜಮೌಳಿ ಅವರು ಈಗ ಟಾಲಿವುಡ್ ಪ್ರಿನ್ಸ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕುರಿತು ಖುದ್ದು ಮಹೇಶ್ ಬಾಬು ಅವರೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಮುಂಬರುವ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ತಮ್ಮ ಸಿನಿಮಾದ ಜರ್ನಿ ಕುರಿತು ಮಾತನಾಡಿದ ಅವರು, ನೀವು ನಿಮಗೆ ಎಲ್ಲ ಗೊತ್ತು ಎಂದು ಯಾವಾಗ ತಿಳಿದುಕೊಳ್ಳುತ್ತೀರೋ, ಆವಾಗ ನೀವು ಹೊಸ ವಿಷಯ ಕಲಿಯುವುದನ್ನು ನಿಲ್ಲಿಸುತ್ತಿರಾ ಎಂದು ಹೇಳಿದರು. ಇದನ್ನೂ ಓದಿ: ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

ನಾನು ದಕ್ಷಣ ಭಾರತದ ನಟನಾಗಿ ಎಲ್ಲ ಭಾಷೆಯಲ್ಲಿಯೂ ನಟಿಸಲು ಇಷ್ಟ ಪಡುತ್ತೇನೆ. ಅದನ್ನು ನಾನು ಎಂದು ಬದಲಾಯಿಸಿಲ್ಲ ಎಂದು ಉತ್ತರಿಸಿದರು. ಸಿನಿಮಾ ಸೂಕ್ಷ್ಮತೆ, ಸ್ಥಳೀಯರು ಹೇಗೆ ಕೇಳುತ್ತಾರೆ ಅದೇ ರೀತಿ ಸಿನಿಮಾವನ್ನು ನಿರೂಪಿಸಲಾಗುತ್ತೆ. ಇಲ್ಲಿ ತುಂಬಾ ಮುಖ್ಯವಾದ ವಿಷಯವೆಂದರೆ ನಾವು ಸಿನಿಮಾದ ಮೂಲಕ ವಿವಿಧ ಸಂಸ್ಕøತಿಗಳನ್ನು ನೀಡಬೇಕು ಎಂದು ತಿಳಿಸಿದರು.

ಬಾಲಿವುಡ್ ಎಂಟ್ರಿ ಕುರಿತು ಮಾತನಾಡಿದ ಅವರು, ನಾನು ಬಾಲಿವುಡ್ ಎಂಟ್ರಿ ಬಗ್ಗೆ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಬಂದಿದೆ. ಅದಕ್ಕೆ ನನ್ನ ಮುಂಬರುವ ಸಿನಿಮಾವನ್ನು ಬಾಹುಬಾಲಿ ಖ್ಯಾತಿಯ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಈ ವಿಷಯ ತಿಳಿದ ಇವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಬೃಹತ್ ಸಿನಿಮಾಗಾಗಿ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ಕುರಿತು ಇನ್ನೂ ಮಹೇಶ್ ಬಾಬು ಏನೂ ಹೇಳಿಲ್ಲ. ಅದು ಅಲ್ಲದೇ ಈ ಕುರಿತು ಯಾವ ರೀತಿಯ ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡ ತಿಳಿಸಿಲ್ಲದ ಕಾರಣ ಮುಂದೆ ಈ ಸ್ಟಾರ್ ಜೋಡಿಗಳ ಸಿನಿಮಾ ಹೇಗೆ ಇರಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ನಟ ವಿಕ್ಕಿ ಕೌಶಲ್ ಬೆನ್ನಿನಲ್ಲಿ ಗಾಯ- ನಿಜವಾಗಿ ಆಗಿದ್ದೇನು?

ಪ್ರಸ್ತುತ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ‘ಸರ್ಕರು ವಾರಿ ಪಾಠ’ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, 2022ರ ಸಂಕ್ರಾಂತಿ ಸಮಯದಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.

Comments

Leave a Reply

Your email address will not be published. Required fields are marked *