14ನೇ ಆವೃತ್ತಿಯ ಐಪಿಎಲ್‍ನ ಕುತೂಹಲಕಾರಿ ಸಂಗತಿಗಳಿವು

ದುಬೈ: 14ನೇ ಆವೃತ್ತಿಯ ಐಪಿಎಲ್ ಅರಬ್‍ರ ನಾಡಲ್ಲಿ ಯಶಸ್ವಿಯಾಗಿ ಮುಗಿದಿದೆ. ಚೆನ್ನೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ನಡುವೆ ಈ ಬಾರಿಯ ಐಪಿಎಲ್‍ನಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳು ನಡೆದಿದೆ. ಆ ಸಂಗತಿಗಳು ಯಾವುವು ಎಂಬ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಲೇ ಬೇಕು.

ಐಪಿಎಲ್ ಎಂಬ ಮಿಲಿಯನ್ ಡಾಲರ್ ಟೂರ್ನಿ ಕ್ರಿಕೆಟ್ ಪ್ರಿಯರಿಗೆ ಒಂದು ಹಬ್ಬ ಇಲ್ಲಿ ಒಂದೇ ರಾತ್ರಿಯಲ್ಲಿ ಸಾಕಷ್ಟು ಆಟಗಾರರು ಸ್ಟಾರ್ ಆಗಿ ಗುರುತಿಸಿಕೊಂಡ ನಿದರ್ಶನಗಳಿವೆ. ಜೊತೆಗೆ ಮೈದಾನದ ಒಳಗೆ ಮತ್ತು ಹೊರಗೆ ಹಲವು ರೋಮಾಂಚನಕಾರಿ ಕ್ಷಣಗಳು ಐಪಿಎಲ್ ವೇಳೆ ಕಾಣಸಿಗುತ್ತದೆ. ಈ ಬಾರಿಯ ಐಪಿಎಲ್‍ನಲ್ಲೂ ಕೂಡ ಇಂತಹ ರೋಮಾಂಚಕ, ಕುತೂಹಲಕಾರಿ ಘಟನೆಗಳು ನಡೆದಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ

14ನೇ ಆವೃತ್ತಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧದಲ್ಲಿ ಸ್ಥಗಿತಗೊಂಡು ಆರಂಭಗೊಂಡಿದ್ದು, ಮೊದಲ ಕುತೂಹಲಕಾರಿ ವಿಷಯವಾಗಿದೆ. ಭಾರತದಲ್ಲಿ ಕೊರೊನಾ ಕಾರಣದಿಂದಾಗಿ ರದ್ದುಗೊಂಡ ಐಪಿಎಲ್ ಬಳಿಕ ದುಬೈನಲ್ಲಿ ಸೆಕೆಂಡ್ ಇನ್ನಿಂಗ್ಸ್ ನಡೆಯಿತು.ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ

ಈ ಬಾರಿಯ ಐಪಿಎಲ್‍ನ ಇನ್ನೊಂದು ಕೂತುಹಲಕಾರಿ ಅಂಶವೆಂದರೆ ಅನ್‍ಕ್ಯಾಪ್ಡ್ ಆಟಗಾರರಾದ ಚೆನ್ನೈ ತಂಡದ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದರೆ, ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ ಅತೀ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

14ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ಚೆನ್ನೈ ತಂಡವನ್ನು ಮುನ್ನಡೆಸಿದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಂದಲೂ ನಿವೃತ್ತರಾಗಿ ಐಪಿಎಲ್ ಟ್ರೋಫಿಗೆದ್ದ ಮೊದಲ ನಾಯಕ ಎಂಬ ದಾಖಲೆಯ ಅಂಶ ಕೂಡ ಈ ಬಾರಿಯ ಐಪಿಎಲ್‍ನ ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *