ಯಾರನ್ನೋ ನಿಯಂತ್ರಿಸಲು ಐಟಿ ದಾಳಿ ನಡೆದಿಲ್ಲ: ಮುನಿರತ್ನ

ದಾವಣಗೆರೆ: ಯಾರನ್ನೋ ನಿಯಂತ್ರಿಸಲು ಐಟಿ ದಾಳಿ ನಡೆದಿಲ್ಲ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಿಎಂ ಆಪ್ತನ ಮೇಲೆ ಐಟಿ ದಾಳಿಗೆ ಪ್ರತಿಕ್ರಿಯಿಸಿ, ಯಾರನ್ನೋ ನಿಯಂತ್ರಿಸಲು ಐಟಿ ದಾಳಿ ನಡೆದಿಲ್ಲ. ಈ ಹಿಂದೆ ಐಟಿ ದಾಳಿಗಳು ಕೇಂದ್ರ ಸರ್ಕಾರ ಪ್ರಾಯೋಜಿತ ಎಂಬ ಆರೋಪಗಳಿದ್ದವು. ಈಗ ಕಾಂಗ್ರೆಸ್ಸಿನವರು ಏಕೆ ಮಾತನಾಡುತ್ತಿಲ್ಲ. ಪ್ರತಿಯೊಂದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಪ್ರಸ್ತಾಪಿಸೋದು ಸಹಜ. ಎಲ್ಲ ಸರ್ಕಾರಗಳ ಕಾಲದಲ್ಲೂ ಬೆಲೆ ಏರಿಕೆ ಆಗಿದೆ. ಅವರವರ ಮೂಗಿನ ನೇರಕ್ಕೆ ಅವರು ಮಾತನಾಡುತ್ತಾರೆ, ಅದಲ್ಲೇನು ಹುರುಳಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಜನರ ಒಲವು ಬಿಜೆಪಿ ಕಡೆಗೆ ಇದೆ. ಚುನಾವಣೆ ಕಾರ್ಯ ಯೋಜನೆ ಬಗ್ಗೆ ಸಿಎಂ ಚರ್ಚೆ ನಡೆಸಿದರು. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

ಬೆಂಗಳೂರು ಜಿಲ್ಲೆ ಉಸ್ತುವಾರಿ ಸಿಎಂ ಬಳಿ ಇದೆ. ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಕಾಮಗಾರಿಗೆ ಚಾಲನೆ ದೊರೆತಿದೆ. ಸಿಎಂ ಬೊಮ್ಮಾಯಿ ಉಸ್ತುವಾರಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಬೆಂಗಳೂರು ಉಸ್ತುವಾರಿ ಸಿಎಂ ಕೈಯಲ್ಲಿರುವಾಗ ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನಾವೆಲ್ಲರೂ ಸಿಎಂ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಬಳಿ ಉಸ್ತುವಾರಿ ಇದ್ದರೂ ನಮಗೆ ಅಭ್ಯಂತರವಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

Comments

Leave a Reply

Your email address will not be published. Required fields are marked *