ಕೊನೆ ಕ್ಷಣದಲ್ಲಿ ಅಜಯ್ ದೇವ್‍ಗನ್ ಜೊತೆ ಶೂಟ್ ಬೇಡವೆಂದ ನಟ ಶಾರೂಖ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಅಜಯ್ ದೇವ್ ಗನ್ ಜೊತೆಗೆ ಜಾಹೀರಾತು ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಿದ್ದು, ಕೊನೆಯ ಕ್ಷಣದಲ್ಲಿ ಶೂಟಿಂಗ್ ಬೇಡ ಎಂದಿದ್ದಾರೆ.

ಶಾರೂಖ್ ಖಾನ್ ಪ್ರಸ್ತುತ ವೈಯಕ್ತಿಕ ಜೀವನದಲ್ಲಿ ತುಂಬಾ ನೋವು ಅನುಭವಿಸುತ್ತಿದ್ದು, ಈ ನಡುವೆ ಬಾಲಿವುಡ್ ನಟ ಅಜಯ್ ದೇವ್ ಗನ್ ಜೊತೆಗೆ ಜಾಹೀರಾತಿನಲ್ಲಿ ನಟಿಸಬೇಕಾಗಿತ್ತು. ಆದರೆ ಇವರು ಕೊನೆ ಕ್ಷಣದಲ್ಲಿ ತಮ್ಮ ಮಗ ಆರ್ಯನ್ ಖಾನ್ ಎಸ್‌ಆರ್‌ಕೆ ಡ್ರಗ್ಸ್ ಪ್ರಕರಣ ತಿಳಿದು ಶೂಟಿಂಗ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ

ವರದಿಗಳ ಪ್ರಕಾರ, ಶಾರೂಖ್ ಖಾನ್‍ಗಾಗಿ ಸೆಟ್‍ನಲ್ಲಿ ಸು.20-25 ಬೌನ್ಸರ್‌ಗಳನ್ನು ಇರಿಸಲಾಗಿತ್ತು. ಅವರ ವ್ಯಾನಿಟಿ ವ್ಯಾನ್ ಕೂಡ ಬೆಳಗ್ಗೆಯಿಂದ ಸ್ಟುಡಿಯೋದಲ್ಲಿತ್ತು. ಆದರೆ ಮಧ್ಯಾಹ್ನ 3-4 ಗಂಟೆ ಸುಮಾರಿಗೆ ಶಾರೂಖ್ ಶೂಟಿಂಗ್ ನಿಲ್ಲಿಸುವಂತೆ ಕರೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಈ ಶೂಟಿಂಗ್ ನಟ ಅಜಯ್ ದೇವ್ ಗನ್ ಅವರೊಂದಿಗೆ ಮಾಡಬೇಕಿದ್ದು, ತಮ್ಮ ವೈಯಕ್ತಿಕ ಜೀವನದಲ್ಲಿ ತೊಂದರೆಯಾಗಿದ್ದರಿಂದ ಶಾರೂಖ್ ಶೂಟಿಂಗ್ ನಿಲ್ಲಿಸಲಾಗಿದೆ. ಈ ವೇಳೆ ಅಜಯ್ ದೇವ್ ಗನ್ ಮುಂಚೆಯೇ ಸೆಟ್ ನಲ್ಲಿ ಇದ್ದು, ಆ ದಿನದ ಅವರ ಶೂಟಿಂಗ್ ಮುಗಿಸಿದ್ದಾರೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

ಆರ್ಯನ್ ಖಾನ್ ಕಸ್ಟಡಿ ಇಂದಿಗೆ ಕೊನೆಗೊಳ್ಳುತ್ತಿದ್ದು, ಇಂದು ಅವರ ವಕೀಲರು ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ರೇವ್ ಪಾರ್ಟಿ ಪ್ರಕರಣದಲ್ಲಿ ಜಾಮೀನಿಗಾಗಿ ಆರ್ಯನ್ ನನ್ನು ಇಂದು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆರ್ಯನ್ ಅಲ್ಲದೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಈ ಪ್ರಕರಣದ ಹಿನ್ನೆಲೆ ಬಂಧಿಸಲಾಗಿತ್ತು. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು

ಖಾನ್ ಜೊತೆಗಿದ್ದ ವಕೀಲ ಸತೀಶ್ ಮನೆಶಿಂಧೆ, ಕೇವಲ ವಾಟ್ಸಪ್ ಚಾಟ್‍ಗಳ ಆಧಾರದಲ್ಲಿ ಆರ್ಯನ್ ಅವರನ್ನು ಎನ್‍ಸಿಬಿ ವಶಕ್ಕೆ ನೀಡಬಾರದು. ಅದು ಅಲ್ಲದೇ ಅವರ ಬಳಿ ಯಾವುದೇ ರೀತಿಯ ಡ್ರಗ್ಸ್ ಕೂಡ ಪತ್ತೆಯಾಗಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೂ ಸಹ ಆರ್ಯನ್ ನನ್ನು ಮುಂದಿನ ತನಿಖೆಗಾಗಿ ಎನ್‍ಸಿಬಿ ವಶಕ್ಕೆ ಪಡೆದುಕೊಂಡಿತ್ತು.

Comments

Leave a Reply

Your email address will not be published. Required fields are marked *