ಕುಟುಂಬ ಸಮೇತ ಪ್ಯಾರಿಸ್‍ಗೆ ಹಾರಿದ ಬಾಲಿವುಡ್ ನಟಿ ಐಶ್ವರ್ಯಾ ರೈ

Aishwarya Rai

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ, ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

Aishwarya Rai

ಪ್ಯಾರಿಸ್ ಫ್ಯಾಷನ್ ವೀಕ್ ಆಯೋಜಿಸಿದ್ದ ಔಟ್ ಡೋರ್ ರನ್ ವೇ ಶೋನ ಲೆ ಡಿಫಿಲೀ ಲೋರಿಯನ್ ಪ್ಯಾರಿಸ್‍ನ ನಾಲ್ಕನೇ ಆವೃತ್ತಿಗೆ ಕುಟುಂಬ ಸಮೇತ ಐಶ್ವರ್ಯಾ ರೈ ಪ್ಯಾರೀಸ್‍ಗೆ ಹಾರಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಐಶ್ವರ್ಯಾ ರೈ ಇದೇ ಮೊದಲ ಬಾರಿಗೆ ಪ್ರವಾಸ ಕೈಗೊಂಡಿದ್ದಾರೆ.

Aishwarya Rai

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2019ರಿಂದ ಯಾವುದೇ ಪ್ರವಾಸವನ್ನು ಕೈಗೊಳ್ಳದ ಐಶ್ವರ್ಯಾ ರೈ ಇದೀಗ ಸಂಪೂರ್ಣ ಲಸಿಕೆ ಸ್ವೀಕರಿಸಿದ ನಂತರ ಪ್ಯಾರಿಸ್‍ಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

ಕಾರಿನಿಂದ ಲಗೇಜ್ ಸಮೇತ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಇದನ್ನೂ ಓದಿ: ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

Aishwarya Rai

ಈ ವೇಳೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಮಗಳ ಕೈ ಹಾಗೂ ಲಗೇಜ್ ಹಿಡಿದುಕೊಂಡು ಮುಂದೆ ಸಾಗಿದರು. ಅಭಿಷೇಕ್ ಬಚ್ಚನ್ ಗ್ರೆ ಕಲರ್ ಡ್ರೆಸ್ ತೊಟ್ಟಿದ್ದರೆ, ಐಶ್ವರ್ಯಾ ರೈ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಡ್ರೆಸ್‍ನಲ್ಲಿ ಮಿಂಚಿದ್ದರು.

Aishwarya Rai

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೂವರು ಮಾಸ್ಕ್ ಧರಿಸಿ ಕೋವಿಡ್ ನಿಯಮವನ್ನು ಪಾಲಿಸಿದ್ದಾರೆ. ಅಲ್ಲದೇ ಆರಾಧ್ಯ ಫೇಸ್ ಶೀಲ್ಡ್  ಕೂಡ ಧರಿಸಿದ್ದರು. ಇದನ್ನೂ ಓದಿ: ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

https://www.youtube.com/watch?v=cEEcitdkyiY

Comments

Leave a Reply

Your email address will not be published. Required fields are marked *