ತಂದೆ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು: ಜಗ್ಗೇಶ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಈಗ ಅವರೊಂದು ವಿಶೇಷ ಕಾರಿನ ಬಗ್ಗೆ ಬರೆದುಕೊಂಡಿದ್ದಾರೆ. ಆ ಕಾರನ್ನು ನೋಡಿದ ಕೂಡಲೇ ಅವರಿಗೆ ತಮ್ಮ ತಂದೆಯ ನೆನಪಾಗಿದೆ. ಅದನ್ನು ಅವರು ಟ್ವೀಟ್ ಮೂಲಕ ಅಭಿಮಾನಿಗಳಿಗೂ ತಿಳಿಸಿದ್ದಾರೆ.

1930 ಆಸ್ಟಿನ್ ಇಂಗ್ಲೆಂಡ್ ಕಾರು. ಇದು ಅಪ್ಪ ಹುಟ್ಟಿದ ವರ್ಷದ ಕಾರು. ಇಂದು ನಮ್ಮ ಅಪ್ಪನಿಗೆ ಪಿತೃಪಕ್ಷ ಪೂಜೆ ಮಾಡಲು ಮಾಯಸಂದ್ರಕ್ಕೆ ತೆರಳುವಾಗ ಸಿಕ್ಕಿತು. ಅಪ್ಪನ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೇ ಸಂತೋಷವಾಯಿತು. ಲವ್ ಯೂ ಅಪ್ಪ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಅವರ ಅಭಿಮಾನಿಗಳು ಅದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.  ಇದನ್ನೂ ಓದಿ: ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ, ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು: ಕಾರಜೋಳ

ಹಳೇ ಕಾಲದ ಕಾರುಗಳನ್ನು ನೋಡುವುದೇ ಚಂದ. ಅವುಗಳ ವಿನ್ಯಾಸವಂತೂ ಎಲ್ಲರ ಗಮನ ಸೆಳೆಯುತ್ತವೆ. ರೆಟ್ರೋ ಕಾಲದ ಕಾರುಗಳು ನೋಡಲು ಸಿಗುವುದು ಕೂಡ ಅಪರೂಪ. ಪಿತೃಪಕ್ಷ ಪೂಜೆಗೆಂದು ಹೋಗುವಾಗ ಜಗ್ಗೇಶ್ ಕಣ್ಣಿಗೆ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರು ಕಾಣಿಸಿದೆ. ಅದಕ್ಕೆ ಅವರು ಸಖತ್ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ:  ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ತಮ್ಮ ಅಭಿಮಾನಿಗಳ ಜೊತೆ ಜಗ್ಗೇಶ್ ಅವರು ಸಂಪರ್ಕದಲ್ಲಿ ಇರುತ್ತಾರೆ. ಆಗಾಗ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ತಮ್ಮ ತಂದೆಯನ್ನು ನೆನೆದು ಸೋಶಿಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *