ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

ಪಾಟ್ನಾ: ಕನ್ಹಯ್ಯ ಮತ್ತೊಬ್ಬ ಸಿಧು, ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್​​ಜೆಡಿ ( RJD) ಕನ್ಹಯ್ಯ ಕುಮಾರ್ ಕಾಂಗ್ರೆಸ್‍ಗೆ ಸೇರ್ಪಡೆ ಆಗಿದ್ದನ್ನು ಗೇಲಿ ಮಾಡಿದೆ.

ಜೆಎನ್‍ಯುನ ಮಾಜಿ ವಿದ್ಯಾರ್ಥಿಯು ಇನ್ನೊಬ್ಬ ನವಜೋತ್ ಸಿಂಗ್ ಸಿಧುನಂತೆ ಇದ್ದಾರೆ. ಅವರು ಹಳೆಯ ಪಕ್ಷವನ್ನು ನಾಶಪಡಿಸುತ್ತಾರೆ. ಎಂದು ಆರ್​​ಜೆಡಿ ವಾಗ್ದಾಳಿ ಮಾಡಿದೆ. ಇದೇ ವೇಳೆ  ಕಾಂಗ್ರೆಸ್ ಮುಳುಗುವ ಹಡಗು ಎಂದಿದ್ದನ್ನು ವ್ಯಂಗ್ಯವಾಡಿದ ಹಿರಿಯ ಆರ್ ಜೆಡಿ ನಾಯಕ ಶಿವಾನಂದ್ ತಿವಾರಿ (Shivanand Tiwari), ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ: ಕನ್ನಯ್ಯ ಕುಮಾರ್

ಕಾಂಗ್ರೆಸ್ ದೊಡ್ಡ ಹಡಗು ಅದನ್ನು ಉಳಿಸಬೇಕಾಗಿದೆ ಎಂದು ಕನ್ಹಯ್ಯ ಮಾತನ್ನು ಉಲ್ಲೇಖಿಸಿದ ತಿವಾರಿ, ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿದ್ದಾರೆ ಎಂದು ಹೇಳಿದರು.

ತೇಜಸ್ವಿ ಯಾದವ್ ನೇತೃತ್ವದ ಪಕ್ಷವನ್ನು ಸಂಪರ್ಕಿಸದೆ ಕುಮಾರ್ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡಿದ್ದಕ್ಕೆ ಪಕ್ಷವು ಅತೃಪ್ತಿ ಹೊಂದಿದೆ ಎಂದು ಆರ್ ಜೆಡಿ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಆರ್ ಜೆಡಿ ನೇತೃತ್ವದ ವಿರೋಧ ಮೈತ್ರಿಕೂಟದ ಮಹಾಘಟಬಂಧನ್‍ನ ಒಂದು ಭಾಗವಾಗಿದ್ದು, ಅದು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ವಿರುದ್ಧ ಹೋರಾಡಿದೆ. ಬಿಹಾರ ಕಾಂಗ್ರೆಸ್ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Comments

Leave a Reply

Your email address will not be published. Required fields are marked *