ವೀಡಿಯೋ: ಸೂಪರ್ ಹಿಟ್ ಹಾಡು ಹಾಡಿ ರಾನು ಮೊಂಡಲ್ ಮತ್ತೆ ವೈರಲ್

ಮುಂಬೈ: ರೈಲ್ವೇ ಫ್ಲಾಟ್‍ಫಾರಂನಲ್ಲಿ ಕುಳಿತು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ವೀಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು. 2 ವರ್ಷಗಳ ಹಿಂದೆ ಹಾಡು ಹಾಡಿ ಸೋಶಿಯಲ್ ಮೀಡಿಯಾದಲ್ಲೇ ಧೂಳೆಬ್ಬಿಸಿದ್ದ ರಾನು ಅವರು ಇದೀಗ ಮತ್ತೆ ಹೊಸ ಹಾಡಿನೊಂದಿಗೆ ವೈರಲ್ ಆಗಿದ್ದಾರೆ. ಮನಿಕೆ ಮಗೆ ಹಿತೆ… ಹಾಡು ಹಾಡುತ್ತಿರುವ ವಿಡಿಯೋವನ್ನು ರೊಂಧೋನ್ ಪೊರಿಚೋಯ್ ಎಂಬ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ನೋಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಮತ್ತೆ ಕತ್ತಲು

ಈ ಹಾಡು ಹಾಡುವಾಗ ರಾನು ಮೊಂಡಲ್ ಅವರು, ಕೆಂಪು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಸದ್ಯ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಮೊದಲೇ ಮನಿಕೆ ಮಗೆ ಹಿತೆ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ರಾನು ಮಂಡಲ್ ಧ್ವನಿಯಲ್ಲಿ ಆ ಹಾಡು ಹೆಚ್ಚು ವೀಕ್ಷಕರನ್ನು ಗಳಿಸುತ್ತಿದೆ. ಮನಿಕೆ ಮಗೆ ಹಿತೆ ಎಂಬುದು ಸಿಂಹಳ ಭಾಷೆಯ ಶ್ರೀಲಂಕಾದ ಹಾಡಾಗಿದ್ದು, ಶ್ರೀಲಂಕಾದ ಹಾಡುಗಾರ್ತಿ ಯೋಹಾನಿ ದಿಲೋಕ ಡ ಸಿಲ್ವಾ ಎಂಬಾಕೆ ಹಾಡಿದ್ದಾರೆ.  ಇದನ್ನೂ ಓದಿ: ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಾನು ಮೊಂಡಲ್ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿದ್ದ ರಾನು ಮೊಂಡಲ್ ಲಾಕ್‍ಡೌನ್ ಮುಂಚೆ ಗಳಿಸಿದ ಹಣದಲ್ಲಿಯೇ ಕಷ್ಟಕರ ಜೀವನ ನಡೆಸುತ್ತಿದ್ದರು. ಉದ್ಯೋಗಕ್ಕಾಗಿ ಮುಂಬೈಗೆ ಬಂದ ನೆಲೆಸಿದ್ರೂ ರಾನು ಕೈ ಮಾತ್ರ ಖಾಲಿಯಾಗಿತ್ತು. ಇದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

Comments

Leave a Reply

Your email address will not be published. Required fields are marked *