ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

– ತಂದೆಯ ರಾಸಲೀಲೆಯ ಸ್ಕ್ರೀನ್ ಶಾಟ್ ಸೇವ್ ಮಾಡಿದ್ದ ಪುತ್ರ
– ಲ್ಯಾಪ್‍ಟಾಪ್‍ನಲ್ಲಿ ತಂದೆಯ ವಿರುದ್ಧ ಸಾಕ್ಷ್ಯ ಸಂಗ್ರಹ

ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾವು ಸತ್ತ ಮೇಲೆ ನೀನು ನೆಮ್ಮದಿಯಾಗಿರಬಾರದು ಎಂದು ಶಂಕರ್ ರಾಸಲೀಲೆ ಬಯಲು ಮಾಡಿ ಮಗ ಮಧು ಸಾಗರ್ ಸಮರ ಸಾರಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ ಸಿಟಿ ಆಕ್ಸಿಡೆಂಟ್ ಕೇಸಿಗೆ ತಿಲಾಂಜಲಿ? – ಇಬ್ಬರ ಜೀವ ತೆಗೆದವನಿಗೆ ಸ್ಟೇಷನ್ ಬೇಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಪುತ್ರ ಮಧು ಸಾಗರ್, ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು. ನಮ್ಮ ಸಾವು ನಿನಗೆ ಪಾಠ ಆಗಬೇಕು. ನಮ್ಮ ಸಾವಿಗೆ ನಮ್ಮ ಅಪ್ಪನೇ ಕಾರಣ. ನಮ್ಮ ಅಪ್ಪನ ವಿರುದ್ಧ ನಾನು ಸಾಕ್ಷ್ಯ ಕಲೆ ಹಾಕಿದ್ದೇನೆ. ನಾನು ಸತ್ತ ಮೇಲೆ ಕೂಡ ನನ್ನ ಲ್ಯಾಪ್ ಟಾಪ್ ಅಲ್ಲಿ ಸಾಕ್ಷ್ಯಗಳನ್ನು ಇರುತ್ತದೆ. ನಮ್ಮ ಅಪ್ಪನ ಅಸಲಿ ಮುಖ ಅನಾವರಣ ಆಗುತ್ತದೆ. ಅಲ್ಲದೇ ನನ್ನ ಅಪ್ಪ ಬ್ಲಾಕ್ ಮೇಲ್ ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ.

ಇದೀಗ ಪೊಲೀಸರು ಆ ಲ್ಯಾಪ್ ಟಾಪ್ ಗಳನ್ನು ರಿಟ್ರೀವ್ ಮಾಡಿದ್ದು, 15 ಸ್ಕ್ರೀನ್ ಶಾಟ್ ಗಳು ಸಿಕ್ಕಿದೆ. ಮನೆಯಲ್ಲಿ ಸಿಕ್ಕ ಪೆನ್ ಡ್ರೈವ್ ಮತ್ತು ಒಂದು ಲ್ಯಾಪ್ ಟಾಪ್ ಸಂಪೂರ್ಣ ಖಾಲಿ ಇತ್ತು. ಆದರೆ ಆಪಲ್ ಕಂಪನಿಯ ಲ್ಯಾಪ್ ಟಾಪ್ ಅಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ಅಪ್ಪನ ರಾಸಲೀಲೆಯ ಸ್ಕ್ರೀನ್ ಶಾಟ್ ಗಳನ್ನು ಆ ಲ್ಯಾಪ್‍ಟಾಪ್ ಅಲ್ಲಿ ಮಧು ಸಾಗರ್ ಇರಿಸಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:  ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ

ಈ ವೇಳೆ ಶಂಕರ್ ಒಂದೇ ಒಂದು ಹೆಂಗಸಿನ ಜೊತೆಯಲ್ಲಿ ಮಾತ್ರ ಅಲ್ಲ, ನಾಲ್ವರು ಹೆಂಗಸರುಗಳ ಜೊತೆಯಲ್ಲಿ ವಾಟ್ಸಾಪ್ ಚಾಟ್ ಮಾಡಿರುವುದು ಬಹಿರಂಗಗೊಂಡಿದೆ. ಶಂಕರ್ ಮಗ ಮಧು ಸಾಗರ್ ಶಂಕರ್ ಮೊಬೈಲ್ ನಿಂದಲೇ ಈ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಮಧು ಸಾಗರ್ ಶಂಕರ್ ಮೊಬೈಲ್ ನಿಂದ ಸ್ಕ್ರೀನ್ ಶಾಟ್ ಗಳನ್ನು ಸೇವ್ ಮಾಡಿದ್ದಾನೆ. ಬಳಿಕ ಆ ಸ್ಕ್ರೀನ್ ಶಾಟ್‍ಗಳೆಲ್ಲವನ್ನೂ ತನ್ನ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹ ಮಾಡಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ ಗಳು ಈಗ ಪೊಲೀಸರ ಕೈ ಸೇರಿದೆ. ಅದರಲ್ಲಿ ಶಂಕರ್ ನಾಲ್ವರು ಮಹಿಳೆಯರ ಜೊತೆಯಲ್ಲಿ ಚಾಟ್ ಮಾಡಿ ಮಾತನಾಡಿದ್ದು, ಹಾಯ್, ಏನ್ಮಾಡ್ತಾ ಇದ್ದೀಯಾ? ಎಲ್ಲಿ ಇದ್ದೀಯಾ? ಇವತ್ತು ಏನಾದ್ರೂ ಸಿಕ್ತಿಯಾ? ಡ್ರಿಂಕ್ಸ್ ಮಾಡೋಣ ಇವತ್ತು ಜೊತೆ ಕಂಪನಿ ಕೊಡು ಅಂತ ಕರೆದಿರುವುದು. ಅಲ್ಲದೇ ಆ ನಾಲ್ವರು ಮಹಿಳೆಯರ ಜೊತೆ ಸ್ವಲ್ಪ ಅಸಭ್ಯವಾಗಿ ಚಾಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಈ ಕುರಿತಂತೆ ಪೊಲೀಸರು ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಿದ್ದಾರೆ.

 

ಸದ್ಯ ಒಂದೇ ಕುಟುಂಬದ ಐವರ ಸಾವು ಪ್ರಕರಣ ಟ್ವಿಸ್ಟ್ ಸಿಕ್ಕಿದ್ದು, ಈಗಾಗಲೇ ಕಾನೂನು ಸಲಹೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ಶಂಕರ್ ವಿರುದ್ಧ ಮಕ್ಕಳು ತಮ್ಮ ಸಾವಿಗೆ ತಂದೆ ಶಂಕರ್ ನ ನೇರವಾಗಿ ಹೊಣೆ ಮಾಡಿರುವುದು ಹಾಗೂ ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆ ಐಪಿಸಿ 306 ಅಡಿಯಲ್ಲಿ ಶಂಕರ್ ವಿರುದ್ಧ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಜೊತೆಗೆ ಶಂಕರ್ ಜೊತೆಗೆ 9 ತಿಂಗಳ ಮಗು ಕೊಂದ ಹಿನ್ನಲೆ ಮೃತ ಸಿಂಧೂರಾಣಿ ಮೇಲೆ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

 

Comments

Leave a Reply

Your email address will not be published. Required fields are marked *