ಕೆಜಿಎಫ್ ಎಸ್‍ಪಿ ಅಂಗರಕ್ಷಕನ ಮೇಲೆ ಹಲ್ಲೆ – ಐವರ ಬಂಧನ

ಕೋಲಾರ: ಕೆಜಿಎಫ್ ಜಿಲ್ಲಾ ವರಿಷ್ಠಾಧಿಕಾರಿ ಅಜ್ಜಪ್ಪನಹಳ್ಳಿ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಐವರು ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಅಂಗರಕ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಈ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, ನನ್ನ ಬೆಂಗಾವಲು ಸಿಬ್ಬಂದಿ ಮುನಿರತ್ನ ಅವರ ಮೇಲೆ ಐವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

ಇಲಕ್ಕಿಯಾ ಅವರ ಅಂಗರಕ್ಷಕನ ಮೇಲೆ ದುಷ್ಕರ್ಮಿಗಳು ಭಾನುವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಂಗರಕ್ಷಕ ಮುನಿರತ್ನಂ ಹಲ್ಲೆಗೊಳಗಾಗಿದ್ದು, ಭಾನುವಾರ ಸಂಜೆ ಬಂಗಾರಪೇಟೆಯಿಂದ ಬೈಕ್ ನಲ್ಲಿ ಕೆಜಿಎಫ್‍ಗೆ ಬರುತ್ತಿದ್ದ ವೇಳೆ ಅಜ್ಜಪ್ಪನಹಳ್ಳಿ ಬಳಿ ಬೈಕ್ ಅಡ್ಡಗಟ್ಟಿದ ಐವರು ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ.

ಈ ವೇಳೆ ಗಾಯಗೊಂಡಿದ್ದ ಮುನಿರತ್ನಂ ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಸಂಬಂಧ ಕಾರ್ಯ ಪ್ರೌರುತ್ತರಾದ ಉರಿಗಾಂ ಪೊಲೀಸ್ ಠಾಣಾ ಸರ್ಕಲ್ ಇನ್ಸ್ ಸ್ಪೆಕ್ಟರ್ ವೆಂಕಟರಮಣಪ್ಪ ಹಾಗೂ ಸಿಬ್ಬಂದಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಅವಿನಾಶ್ ರಾಜ್, ಸ್ಯಾಮ್ ಸ್ಟೀಫನ್, ರಂಜಿತ್, ಅಜಯ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:  ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

ಇಲಕ್ಕಿಯಾ ಅವರು ಭಾನುವಾರ ರಾತ್ರಿ ಕೆಜಿಎಫ್‍ನ ಅಜ್ಜಪನಹಳ್ಳಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದಾಗ 5 ಮಂದಿ ದುಷ್ಕರ್ಮಿಗಳು ಬೈಕ್‍ಗಳಲ್ಲಿ ಹಿಂಬಾಲಿಸಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ ಎಂದು ಸೋಮವಾರ ಸಂಜೆ ವದಂತಿ ಹಬ್ಬಿತ್ತು.

Comments

Leave a Reply

Your email address will not be published. Required fields are marked *