ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್

ಚಿಕ್ಕಬಳ್ಳಾಪುರ: ಭಾರತ್ ಬಂದ್ ಬೆಂಬಲಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಗ್ಗೆ ರೈತರು ಪ್ರತಿಭಟನೆ ಧರಣಿ ಪಂಜಿನ ಮೆರವಣಿಗೆ ನಡೆಸುತ್ತಿದ್ರೂ ಸಹ ಕೆಎಸ್‌ಆರ್‌ಟಿಸಿ ಬಸ್ಸುಗಳು ಮಾತ್ರ ಎಂದಿನಂತೆ ಸಂಚಾರ ಆರಂಭಿಸಿವೆ.

ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಕೆಎಸ್‌ಆರ್‌ಟಿಸಿ  ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ಎಂದಿನಂತೆ ಬಂದು ತಮ್ಮ ಪ್ರಯಾಣವನ್ನು ಮಾಡುತ್ತಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಗಳಿಗೆ ಬಂದ್ ನ ಬಿಸಿ ಇಲ್ಲವಾಗಿದೆ. ಇದನ್ನೂ ಓದಿ: ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ

ಬೆಳಗ್ಗೆ 07 ಗಂಟೆಯವರೆಗೆ ಆರಂಭವಾಗಬೇಕಾದ 18 ಮಾರ್ಗಗಳ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ಯಾವುದೇ ವ್ಯತ್ಯಾಸವಿಲ್ಲ ಎಂದು ಕೆಎಸ್‌ಆರ್‌ಟಿಸಿ ಡಿ.ಸಿ ಹಿಮವರ್ಧನ್ ನಾಯ್ಡು ಪಬ್ಲಿಕ್ ಟಿವಿ ಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಎಂದಿನಂತೆ ಸಾರ್ವಜನಿಕರಿಗೆ ಸೇವೆ ಒದಗಿಸುವ ಸಲುವಾಗಿ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ಬಂದ್ ಹಿನ್ನೆಲೆ ಪ್ರಯಾಣಿಕರ ಕೊರತೆ ಕಾಣುತ್ತಿದೆ. ಬಂದ್ ಎಂಬ ಕಾರಣಕ್ಕೆ ಎಂದಿನಂತೆ ಬಸ್ ನಿಲ್ದಾಣಗಳತ್ತ ಪ್ರಯಾಣಿಕರು ಬರ್ತಿಲ್ಲ. ಆದರೂ ನಾವು ಎಂದಿನಂತೆ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭ

ಮುಂಜಾಗ್ರತ ಕ್ರಮವಾಗಿ ಬಸ್ ನಿಲ್ದಾಣದ ಬಳಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬಸ್ ಗಳಿಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಸಹ ಮಾಡಲಾಗಿದೆ.

Comments

Leave a Reply

Your email address will not be published. Required fields are marked *