ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ನೀಡಿದ ಬಂದ್ ಬೆಂಗಳೂರಿನಲ್ಲಿ ಠುಸ್ ಪಟಾಕಿಯಾಗಿದೆ.

ನಗರದ ಜನ ಜೀವನ ಎಂದಿನಂತೆ ಸಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಜನ ಪ್ರತಿದಿನದಂತೆ ಸಂಚರಿಸುತ್ತಿದ್ದಾರೆ. ಪ್ರತಿಭಟನೆಯಿಂದ ಬಸ್ ತಡೆಯಬಾರದು ಎಂಬ ಕಾರಣಕ್ಕೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ರೈಲ್ವೇಗೂ ಬಂದ್ ಬಿಸಿ ತಟ್ಟಿಲ್ಲ. ಪ್ರಯಾಣಿಕರ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಹೂವು, ಹಣ್ಣಿನ ಮಾರುಕಟ್ಟೆಗಳಿಗೆ ಜನ ಬರುತ್ತಿದ್ದು ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ರಸ್ತೆ ಸಂಚಾರದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಬಸ್, ರಿಕ್ಷಾ, ಕಾರು, ಬೈಕುಗಳು ಪ್ರತಿದಿನದಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಂಗಳೂರು ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ನಿಂತಿದ್ದು ಸಂಚಾರ ಸುಗಮವಾಗಿ ನಡೆಯುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ – ಇಬ್ಬರು ಸಾವು 

ಕೊರೊನಾದಿಂದ ಭಾರೀ ನಷ್ಟವಾಗಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ಈ ಬಂದ್‍ಗೆ ಬೆಂಬಲ ಸೂಚಿಸಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಬೆಳಗ್ಗಿನ ಜಾವ ಯಾವುದೇ ರೀತಿಯ ಬಂದ್‍ಗೆ ಬೆಂಬಲ ಸಿಕ್ಕಿಲ್ಲ. ಬೆಳಗ್ಗೆ 8 ಗಂಟೆಯ ನಂತರ ಪ್ರತಿಭಟನೆಗಳು ನಡೆಯಲಿರುವ ಕಾರಣ ಕೆಲ ಭಾಗಗಳಲ್ಲಿ ಸಂಚಾರಕ್ಕೆ ಸ್ವಲ್ಪ ಸಮಸ್ಯೆಯಾಗುವ ಸಾಧ್ಯತೆಯಿದೆ.

ಯಾರದ್ದು ಸಂಪೂರ್ಣ ಬೆಂಬಲ?
ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ, ರಾಜ್ಯ ಪ್ರಾಂತ ರೈತ ಸಂಘ, ರೈತ ಕಾರ್ಮಿಕರ ಸಂಘ, ಅಖಿಲ ಭಾರತ್ ಕಿಸಾನ್ ಸಭಾ, ಕರವೇ ಪ್ರವೀಣ್ ಶೆಟ್ಟಿ ಬಣ

ಯಾರದ್ದು ನೈತಿಕ ಬೆಂಬಲ?
ಆಟೋ ಮಾಲೀಕರು, ಕ್ಯಾಬ್ ಚಾಲಕರ ಸಂಘ, ಬ್ಯಾಂಕ್ ಒಕ್ಕೂಟ, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನೌಕರರ ಸಂಘ, ಕರವೇ ನಾರಾಯಣ ಬಣ

ಏನಿರುತ್ತೆ?
ಕೆಎಸ್ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಖಾಸಗಿ ಬಸ್, ಲಾರಿ, ಆಟೋ, ಕ್ಯಾಬ್, ಹೋಟೆಲ್, ಅಂಗಡಿ ಮುಂಗಟ್ಟು, ಶಾಲೆ, ಕಾಲೇಜು, ಸರ್ಕಾರಿ-ಖಾಸಗಿ ಕಚೇರಿ, ಆಸ್ಪತ್ರೆ, ಅಂಬುಲೆನ್ಸ್, ಮೆಡಿಕಲ್.

Comments

Leave a Reply

Your email address will not be published. Required fields are marked *