17ರ ಬಾಲಕಿ ಮೇಲೆ ಅತ್ಯಾಚಾರ, ಎಂಟೂವರೆ ತಿಂಗಳ ಗರ್ಭಿಣಿಯಾದ ಅಪ್ರಾಪ್ತೆ- ಆರೋಪಿ ಬಂಧನ

RAPE CASE

– ಚಿಕ್ಕಮಗಳೂರಿನಲ್ಲಿ ಆಘಾತಕಾರಿ ಘಟನೆ

ಚಿಕ್ಕಮಗಳೂರು: 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಅತ್ಯಾಚಾರಗೈದ 23 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಅಜ್ಜಿ ಮನೆಗೆ ಹೋದಾಗ ಕಾಫಿ ತೋಟದಲ್ಲಿ ಈ ದುರ್ಘಟನೆ ನಡೆದಿದೆ. ಬಾಲಕಿ ಈಗ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. ಮೃದು ಸ್ವಭಾವದ ಕುಟುಂಬ ದೂರು ನೀಡುವುದಕ್ಕೂ ಭಯಪಟ್ಟು, ಮರ್ಯಾದೆಗೆ ಅಂಜಿ ದೂರು ನೀಡಲು ಮುಂದಾಗಿಲ್ಲ. ಒಂದು ವಾರಗಳ ಬಳಿಕ ಯೋಚನೆ ಮಾಡಿ ದೂರು ನೀಡಿದ್ದಾರೆ. ಇದನ್ನೂ ಓದಿ: ಅಪರಾಧಗಳ ಕಡಿವಾಣಕ್ಕೆ ಪೊಲೀಸರ ಹೊಸ ತಂತ್ರ: ಗುಂಪು ಕಟ್ಟುವ ಯುವಕರಿಗೆ ಕ್ಲಾಸ್

ಸಂತ್ರಸ್ತ ಬಾಲಕಿಗೆ ಏಳು ತಿಂಗಳಾದರೂ ಅವರ ಮನೆಯವರಿಗೆ ವಿಷಯ ತಿಳಿದಿಲ್ಲ. ಎಂಟನೇ ತಿಂಗಳಲ್ಲಿ ಮನೆಯವರಿಗೆ ಅನುಮಾನ ಬಂದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *