ಕಾಂಗ್ರೆಸ್‍ನಿಂದ ಬಿಜೆಪಿಗೆ ಬರಲು ಹಲವರು ಸರತಿಯಲ್ಲಿ ನಿಂತಿದ್ದಾರೆ: ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್‍ನಿಂದ ಬಿಜೆಪಿಗೆ ಬರಲು ಹಲವಾರು ಜನ ಸರತಿಯಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿಕೊಂಡು ಬರಲು ತುದಿಗಾಲಲ್ಲಿ ನಿಂತಿದ್ದಾರೆ, ಕಾದು ನೋಡಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಗುಡುಗಿದ್ದಾರೆ.

ನಗರದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಿಮಿತ್ತ ಕಾರ್ಯನಿರ್ವಹಿಸಿದ ಪ್ರಭಂಧಕರಿಗೆ ಅಭಿನಂಧನಾ ಸಮಾರಂಭಕ್ಕೆ ಅಗಮಿಸುವ ಮುನ್ನ ಮಾತನಾಡಿದರು. 2023ಕ್ಕೆ ಕಾಂಗ್ರೆಸ್ ಧೂಳಿಪಟವಾಗುತ್ತೆ, ಕಾಂಗ್ರೆಸ್‍ನಲ್ಲಿರುವ ಸಮಾನ ಮನಸ್ಕರು ಬಿಜೆಪಿಗೆ ಬರುತ್ತಾರೆ, ಕಾದು ನೋಡಿ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾರನ್ನು ಭೇಟಿಯಾದ ಸೋಮಶೇಖರ್ – ರಾಜ್ಯಕ್ಕೆ ಬರುವಂತೆ ಆಹ್ವಾನ

ಯಾವ ಪುರುಷಾರ್ಥಕ್ಕಾಗಿ ಭಾರತ್ ಬಂದ್ ಮಾಡುತ್ತಿದ್ದಾರೆ? ನಕಲಿ ರೈತ ಹೋರಾಟಗಾರರನ್ನು ಜನ ಬೆಂಬಲಿಸುವುದಿಲ್ಲ. ಈ ಭಾರತ್ ಬಂದ್ ಹೋರಾಟಕ್ಕೆ ನಕಲಿ ಕಾಂಗ್ರೆಸ್ ಹೋರಾಟಗಾರರು ಬೆಂಬಲವಾಗಿ ನಿಂತಿದ್ದಾರೆ. ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದೆ, ರೈತರು ಸೇರಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಕಾರ್ಯಕ್ರಮ ನೀಡಿದೆ. ನೊಂದವರಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಜೆಪಿ ಹಾಗೂ ಮೋದಿಯವರವ ವರ್ಚಸ್ಸು ಹೆಚ್ಚುತ್ತಿರುವುದನ್ನು ಕಂಡು ಕಾಂಗ್ರೆಸ್ ಹೋರಾಟದ ಹುನ್ನಾರ ನಡೆಸಿದೆ. ಈ ಹೋರಾಟವನ್ನು ಯಾವ ಜನರೂ ಬೆಂಬಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *