ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್‍ಎಸ್‍ಸಿ) ಭಾರತಕ್ಕೆ ಖಾಯಂ ಸದಸ್ಯತ್ವ ಕಲ್ಪಿಸಬೇಕು ಎಂಬ ಭಾರತದ ಬೇಡಿಕೆಗೆ ಈಗ ಮತ್ತಷ್ಟು ಬಲ ಬಂದಿದ್ದು ಅಮೆರಿಕ ಮತ್ತೆ ಬೆಂಬಲ ಘೋಷಿಸಿದೆ.

ಆಗಸ್ಟ್‌ನಲ್ಲಿ ಯುಎನ್‍ಎಸ್‍ಸಿ ಅಧ್ಯಕ್ಷತೆ ವಹಿಸಿದ್ದ ಭಾರತ, ಅಫ್ಘಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮರ್ಥವಾಗಿ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ನರೇಂದ್ರ ಮೋದಿಯವರೊಂದಿಗಿನ ಮೊದಲ ವೈಯಕ್ತಿಕ ದ್ವಿಪಕ್ಷೀಯ ಸಭೆಯ ಬಳಿಕ ಶ್ವೇತ ಭವನ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಬಲವಾದ ನಾಯಕತ್ವವನ್ನು ಶ್ಲಾಘಿಸಿದ ಬೈಡನ್ ಪರಮಾಣು ಪೂರೈಕೆದಾರರ ಗುಂಪಿಗೂ(ಎನ್‍ಎಸ್‍ಜಿ) ಸೇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಭದ್ರತಾ ಮಂಡಳಿಯ ತುರ್ತು ದೀರ್ಘಾವಧಿಯ ಬಾಕಿ ಇರುವ ಸುಧಾರಣೆಗೆ ಭಾರತ ಮೊದಲಿನಿಂದಲೂ ಆಗ್ರಹಿಸುತ್ತಿದೆ. ಪ್ರಸ್ತುತ ಈಗ ಅಮೆರಿಕ, ಚೀನಾ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಸದಸ್ಯ ರಾಷ್ಟ್ರಗಳಾಗಿದ್ದು ವಿಶೇಷ ವಿಟೋ ಅಧಿಕಾರವನ್ನು ಹೊಂದಿದೆ. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ 

ಇಂದು ಜಗತ್ತು ಬದಲಾಗುತ್ತಿರುವ ಹಿನ್ನೆಲೆಯಲ್ಲಿ 5 ರಾಷ್ಟ್ರಗಳ ಜೊತೆ ಬಲಾಢ್ಯ ರಾಷ್ಟ್ರಗಳಿಗೂ ಸದಸ್ಯ ಸ್ಥಾನ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಭಾರತ ಅಲ್ಲದೇ ಜಪಾನ್, ಬ್ರೆಜೆಲ್, ಜರ್ಮನಿಯೂ ತಮಗೆ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದೆ.

Comments

Leave a Reply

Your email address will not be published. Required fields are marked *