ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಅಂತ್ಯ – ಶೀಘ್ರದಲ್ಲಿ ಡಿಸಿಜಿಐಗೆ ವರದಿ ಸಲ್ಲಿಕೆ

ನವದೆಹಲಿ: ಎರಡು, ಮೂರನೇ ಹಂತದಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ (covaxin)ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಅಂತ್ಯವಾಗಿದ್ದು, ತುರ್ತು ಬಳಕೆಗೆ ಅನುಮತಿ ಕೋರಿ ಶೀಘ್ರದಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(DCGI) ಸಲ್ಲಿಸಲಾಗುವುದು ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಲ್ಲಾ ತಿಳಿಸಿದ್ದಾರೆ.

2-18 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆದಿದ್ದು, 28 ದಿನಗಳ ಅಂತರದಲ್ಲಿ 525 ಮಕ್ಕಳಿಗೆ ಎರಡು ಡೋಸ್ ಲಸಿಕೆ ನೀಡಿ ಪರಿಶೀಲಿಸಿದೆ. ಎರಡು ಮತ್ತು ಮೂರನೇ ಹಂತದಲ್ಲಿ ನಡೆದ ಅಧ್ಯಯನಗಳ ವರದಿ ಸಿದ್ಧವಾಗುತ್ತಿದ್ದು, ಇನ್ನೊಂದು ವಾರದಲ್ಲಿ ಡಿಸಿಜಿಐಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ:  ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

ಕೋವ್ಯಾಕ್ಸಿನ್ ಲಸಿಕೆ ಸದ್ಯ ವಯಸ್ಕರಿಗೆ ನೀಡಲಾಗುತ್ತಿದ್ದು, ಇದೇ ಫಾರ್ಮುಲವನ್ನು ಮಕ್ಕಳ ಮೇಲೆ ಬಳಕೆ ಮಾಡಿದೆ. ಮೇ ನಿಂದ ಪ್ರಯೋಗ ಆರಂಭವಾಗಿದೆ. ಅಂದುಕೊಂಡಂತೆ ಆದಲ್ಲಿ ಅಕ್ಟೋಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಡಾ. ಎಲ್ಲಾ ಹೇಳಿದರು. ಇದನ್ನೂ ಓದಿ:  ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR ) ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ( NIC) ಭಾರತ್ ಬಯೋಟೆಕ್ ಜೊತೆಗೂಡಿ ದೇಶಿವಾಗಿ ಕೋವ್ಯಾಕ್ಸಿನ್  ಹೆಸರಿನಲ್ಲಿ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

Comments

Leave a Reply

Your email address will not be published. Required fields are marked *