ಕಾಬೂಲ್ ಏರ್​ಪೋರ್ಟ್ ಮೇಲೆ ಡ್ರೋನ್ ದಾಳಿ- ತಪ್ಪು ಒಪ್ಪಿಕೊಂಡ ಅಮೆರಿಕ

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ಡ್ರೋನ್ ದಾಳಿಯನ್ನು ಅಮೆರಿಕ ಒಪ್ಪಿಕೊಂಡಿದ್ದು, ಐಸಿಸ್ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು. ಆದರೆ ಮಕ್ಕಳು ಸೇರಿ 10 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಎಡವಟ್ಟು ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್‍ನ ಕಮಾಂಡರ್ ಜನರಲ್ ಕೆನ್ನೆತ್ ಮೆಕೆಂಜಿ ಒಪ್ಪಿಕೊಂಡಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ಡ್ರೋನ್ ದಾಳಿ ಒಂದು ದುರಂತ, ತಪ್ಪು. ಘಟನೆಯಲ್ಲಿ ಸಾವನ್ನಪ್ಪಿದವರ ಸಂಬಂಧಿಕರ ಬಳಿ ನಾವು ಕ್ಷಮೆಯಾಚಿಸುತ್ತೇವೆ, ಸಂತಾಪ ಸೂಚಿಸುತ್ತೇನೆ. ಈ ಭಯಾನಕ ತಪ್ಪಿನಿಂದ ನಾವು ಕಲಿಯಲು ಪ್ರಯತ್ನಿಸುತ್ತೇವೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

ಸಾವನ್ನಪ್ಪಿದ ಕುಟುಂಬಗಳಿಗೆ ಆದ ಹಾನಿಯನ್ನು ತುಂಬಿಕೊಡಲು ಏನು ಮಾಡಬೇಕು ಎಂಬುದರ ಕುರಿತು ಸರ್ಕಾರ ಅಧ್ಯಯನ ನಡೆಸುತ್ತಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್‍ನ ಕಮಾಂಡರ್ ಜನರಲ್ ಕೆನ್ನೆತ್ ಮೆಕೆಂಜಿ ತಿಳಿಸಿದ್ದಾರೆ.

Kabul- Airport

ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಆಗಸ್ಟ್ 30ರೊಳಗೆ ಅಮೆರಿಕನ್ನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಮುಗಿಸಬೇಕೆಂದು ಯುಎಸ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ಅಮೆರಿಕ ಕೊನೇ ಹಂತದ ಸ್ಥಳಾಂತರ ಪ್ರಕ್ರಿಯೆ ವೇಳೆ ಐಸಿಸ್-ಕೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಆಗಸ್ಟ್ 29ರಂದು ಅಮೆರಿಕ ಕಾಬೂಲ್ ಏರ್‍ಪೋರ್ಟ್ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಈ ವೇಳೆ 10 ಜನ ನಾಗರಿಕರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ಆಗಸ್ಟ್ ಕೊನೇ ವಾರದಲ್ಲಿ ಅಮೆರಿಕ ತಮ್ಮ ಯೋಧರ ಮೂಲಕ ನಾಗರಿಕರನ್ನು ಸ್ಥಳಾಂತರ ಮಾಡುತ್ತಿತ್ತು. ಆದರೆ ಐಸಿಸ್-ಕೆ ಉಗ್ರರು ಅಮೆರಿಕ ಸೈನಿಕರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಇದರಲ್ಲಿ ಯುಎಸ್‍ನ 13 ಯೋಧರು ಸಹ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಕಾಬೂಲ್ ಏರ್‍ಪೋರ್ಟ್ ಮೇಲೆ ಡ್ರೋನ್ ದಾಳಿ ನಡೆಸಿತ್ತು.

ವಿಮಾನ ನಿಲ್ದಾಣದ ಬಳಿಯ ಬಿಳಿ ಬಣ್ಣ ಟೊಯೊಟಾ ವಾಹನ ಗುರಿಯಾಗಿಸಿ ಮಾಡಿದ್ದ ದಾಳಿಯಲ್ಲಿ ಮಕ್ಕಳು ಸೇರಿ 10 ಜನ ಸಾವನ್ನಪ್ಪಿದ್ದರು. ನಮ್ಮ ತಪ್ಪಿನಿಂದಾಗಿ ಮುಗ್ದ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಇದೀಗ ಕ್ಷಮೆಯಾಚಿಸಿದೆ.

Comments

Leave a Reply

Your email address will not be published. Required fields are marked *