ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

ದುಬೈ: ಕೋವಿಡ್ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ನಾಳೆಯಿಂದ ದುಬೈನಲ್ಲಿ ಪುನಾರಂಭವಾಗಲಿದ್ದು, 8 ತಂಡಗಳು ಸಹ ಅಭ್ಯಾಸದಲ್ಲಿ ನಿರತವಾಗಿದೆ.

ಕೊರೋನಾ ಕಾರಣದಿಂದ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಈಗ ಮತ್ತೆ ಐಪಿಎಲ್ ಆರಂಭವಾಗುತ್ತಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು

ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 8 ಪಂದ್ಯಗಳನ್ನಾಡಿ 6 ಜಯ ಹಾಗೂ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮೂರನೇ ಸ್ಥಾನ ಅಲಂಕರಿಸಿದೆ. ಇದನ್ನೂ ಓದಿ:ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

ಚುಟುಕು ಕ್ರಿಕೆಟ್‍ನ ಹೊಡಿಬಡಿ ಆಟದಲ್ಲಿ ಈ ಬಾರಿಯ ಐಪಿಎಲ್ ಕೀರಿಟ ಯಾವ ತಂಡದ ಪಾಲಾಗಲಿದೆ ಕಾದುನೋಡಬೇಕಿದೆ.

 

Comments

Leave a Reply

Your email address will not be published. Required fields are marked *