ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಅಣ್ಣನನ್ನ ನೆನೆದ ಧ್ರುವ

ಬೆಂಗಳೂರು: ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಚಂದನವನದ ನಟ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾನನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಮನಮಿಡಿಯುವಂತೆ ಪೋಸ್ಟ್ ಮಾಡಿದ್ದಾರೆ.

ಚಿರು ಅಗಲಿ 1 ವರ್ಷವಾದರೂ ಅಣ್ಣನನ್ನು ಮರೆಯಲು ಧ್ರುವನಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಚಿರುವನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ, ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನಿಲ್ಲದೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಬರೆದು ಚಿರು ಜೊತೆ ಕಳೆದ ಕ್ಷಣಗಳನ್ನು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಧ್ರುವಗೆ ಧೈರ್ಯ ತುಂಬುವ ರೀತಿ ಕಮೆಂಟ್ ಮಾಡುತ್ತಿದ್ದು, ಅವರು ನಿಮ್ಮ ಜೊತೆಯಲ್ಲೇ ಇರುತ್ತಾರೆ, ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:  ಅಕ್ಷಯ್ ತಾಯಿಯ ಸಾವಿಗೆ ಮಿಡಿದ ಮೋದಿ ಹೃದಯ

 

View this post on Instagram

 

A post shared by Dhruva Sarja (@dhruva_sarjaa)

ಈ ವೀಡಿಯೋದಲ್ಲಿ ಧ್ರುವ ಚಿರುಗೆ ಊಟ ಮಾಡಿಸುತ್ತಿವುದು, ಇಬ್ಬರು ಚೆಸ್ ಆಡುತ್ತಿರುವುದು ಮತ್ತು ಚಿರು ಧ್ರುವ ತಲೆಗೆ ಎಣ್ಣೆ ಹಚ್ಚುತ್ತಿರುವ ವೀಡಿಯೋ ಇದೆ. ಈಗೇ ಚಿಕ್ಕವಯಸ್ಸಿನಿಂದ ಚಿರು ಬದುಕಿರುವವರೆಗೂ ಕಳೆದ ಸಂತೋಷದ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಣಪತಿಯ ಕುತ್ತಿಗೆಗೆ ಸುತ್ತಿಕೊಂಡ ನಾಗರ 

ಇತ್ತೀಚೆಗಷ್ಟೇ ಚಿರು ಮತ್ತು ಮೇಘನಾ ರಾಜ್ ಮಗನ ನಾಮಕರಣ ನಡೆದಿದ್ದು, ಈ ವೇಳೆಯು ಧ್ರುವ ಸುದ್ದಿಗೋಷ್ಠಿಯಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ಈ ವೇಳೆ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

Comments

Leave a Reply

Your email address will not be published. Required fields are marked *