ಟೀ ಶರ್ಟ್ ಒಳಗೆ 5, ಪಂಚೆಯೊಳಗೆ 5 ಟೀ ಶರ್ಟ್ ಕದ್ದು ಮಾಲೀಕನ ಕೈಗೆ ಸಿಕ್ಕಿಬಿದ್ದ!

tamil nadu man

ಚೆನ್ನೈ: ಯುವಕನೊಬ್ಬ ಪಂಚೆಯೊಳಗೆ 10 ಟೀ ಶರ್ಟ್ ಕದ್ದು, ಅಂಗಡಿ ಮಾಲೀಕನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇನ್ನೂ ಈ ವೀಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದೆ.

tamil nadu man

ಆರೋಪಿಯನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಹಬ್ಬ ಇದ್ದ ಕಾರಣ ಹೆಚ್ಚು ಜನ ತುಂಬಿದ ಅಂಗಡಿಗೆ ನುಗ್ಗಿ ಲಾಭ ಗಳಿಸಲು ಪ್ರಯತ್ನಿಸಿದ ಆರೋಪಿ ಅಂಗಡಿಯ ಕೆಲಸಗಾರರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

tamil nadu man

ಮೊದಲಿಗೆ ಅಂಗಡಿಯ ಕೆಲಸಗಾರರಿಗೆ ಟೀ ಶರ್ಟ್ ಕೇಳಿ ನಂತರ ಅದನ್ನು ಟ್ರಯಲ್ ರೂಮ್‍ನಲ್ಲಿ ಧರಿಸಿ ಪರಿಶೀಲಿಸುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಬಳಿಕ ಟೀ ಶರ್ಟ್ ಇಲ್ಲದೇ ಟ್ರಯಲ್ ರೂಮ್‍ನಿಂದ ಹೊರಗೆ ಬಂದಾಗ, ಆರೋಪಿಯನ್ನು ಅಂಗಡಿಯವರು ಟೀಶರ್ಟ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಟೀ ಶರ್ಟ್ ಸೈಜ್ ಸರಿ ಇಲ್ಲ ಎಂದು ಅದನ್ನು ಟ್ರಯಲ್ ರೂಮ್‍ನಲ್ಲಿಯೇ ಬಿಟ್ಟಿರುವುದಾಗಿ ಸೆಲ್ವಂ ಮಧನ್ ಹೇಳಿದ್ದಾನೆ. ಇದನ್ನೂ ಓದಿ: ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ

ಈ ಬಗ್ಗೆ ಅನುಮಾನಗೊಂಡ ಅಂಗಡಿಯವರು ಕೂಡಲೆ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಮಾಲೀಕರು ಆರೋಪಿಗೆ ಬಟ್ಟೆಯನ್ನು ತೆಗೆಯುವಂತೆ ಸೂಚಿಸಿದ್ದಾರೆ. ಆಗ ಆರೋಪಿ 5 ಟೀಶರ್ಟ್ ಧರಿಸಿದ್ದು, ಪಂಚೆಯೊಳಗೆ 5 ಟೀ ಶರ್ಟ್ ಬಚ್ಚಿಟ್ಟಿಕೊಂಡಿರುವುದು ಪತ್ತೆಯಾಗಿದೆ. ಆದರೆ ಈ ಘಟನೆ ಸಂಬಂಧ ಮಾಲೀಕರು ಯಾವುದೇ ದೂರು ನೀಡದೇ ಯುವಕನನ್ನು ಹಾಗೆಯೇ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *