ಬರೀ ಯೂರಿನ್, ರಕ್ತ ಪರೀಕ್ಷೆ ಮಾಡಿದ್ರೆ ಸಾಲದು -ಹೇರ್ ಫೋಲಿಕಲ್ ಟೆಸ್ಟ್‌ಗೆ ಇಂದ್ರಜಿತ್ ಆಗ್ರಹ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೀ ಯೂರಿನ್ ಹಾಗೂ ರಕ್ತ ಪರೀಕ್ಷೆ ನಡೆಸಿದರೆ ಸಾಲದು. ಹೇರ್ ಫೋಲಿಕಲ್ ಟೆಸ್ಟ್ ಮಾಡಬೇಕು ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಪ್ರಕರಣ ಸಂಬಂಧ ಯಾರನ್ನು ವಿಚಾರಣೆಗೆ ಕರೆದಿದ್ದೀರೋ ಅವರಿಗೆ ಯಾವುದೇ ರೀತಿಯ ಭಯ ಹುಟ್ಟಿಲ್ಲ. ಕೊರೊನಾ ಎರಡನೇ ಅಲೆಯ ಬಳಿಕ ಅವರು ಮತ್ತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡ್ರಗ್ಸ್‌ ನಟಿಯರಿಗೆ ಹೇರ್ ಫೋಲಿಕಲ್ ಟೆಸ್ಟ್‌ – ಏನಿದು ಟೆಸ್ಟ್‌? ನಿಖರ ಹೇಗೆ?

ನಾನು ಈ ಹಿಂದೆ ಹೇಳಿದಂತೆ ಇದೊಂದು ಇಡೀ ಕರ್ನಾಟಕದ ಇತಿಹಾಸದಲ್ಲಿಯೇ ದೊಡ್ಡ ಸ್ಕ್ಯಾಮ್ ಆಗಿದೆ. ರಾಜಕೀಯ, ಸಮಾಜ, ಯುವಕ ಹಾಗೂ ಚಿತ್ರರಂಗದ ಆ್ಯಂಗಲ್ ಗಳಿವೆ. ಹೀಗಾಗಿ ನೀವು ಕಳಿಸಿರುವವ ಸಂದೇಶದಿಂದ ಯಾರಿಗೂ ಭಯ ಇಲ್ಲ. ಇಂದಿಗೂ ಕೋಟ್ಯಂತರ ರೂ. ಡ್ರಗ್ಸ್ ಕರ್ನಾಟಕ ಮಾತ್ರವಲ್ಲದೇ ಅದರಲ್ಲೂ ಬೆಂಗಳೂರಿನಲ್ಲಿ ಡಂಪ್ ಆಗುತ್ತಿದೆ ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಡ್ರಗ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

ಒಟ್ಟಿನಲ್ಲಿ ಈ ಹಿಂದೆ ಕೆಲವರನ್ನು ಅರೆಸ್ಟ್ ಮಾಡಿ ಟೆಸ್ಟ್ ಮಾಡಿದ್ರಿ. ಇನ್ನೂ ಕೆಲವರನ್ನು ವಿಚಾರಣೆ ನಡೆಸಿ ಹಾಗೆಯೇ ಬಿಟ್ಟು ಕಳುಹಿಸಿದ್ದೀರಿ. ಈ ವಿಚಾರದಲ್ಲಿ ಕೆಲವರಿಗೆ ಬೆಣ್ಣೆ, ಇನ್ನೂ ಕೆಲವರಿಗೆ ಸುಣ್ಣ ಮಾಡಿದ್ದೀರಿ. ಹೀಗಾಗಿ ಇಂದು ಕುಡ ಪಾರ್ಟಿಗಳು ನಡೆಯಲು ಕಾರಣವಾಗಿದೆ. ಹೀಗೆ ಯಾಕೆ ಮಾಡಿದ್ದೀರಿ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

Comments

Leave a Reply

Your email address will not be published. Required fields are marked *