ಅನುಮಾನಾಸ್ಪದ ರೀತಿಯಲ್ಲಿ ತಾಯಿ, ಮಗನ ಹತ್ಯೆ

ಕೋಲ್ಕತ್ತಾ: ಶಾಲಾ ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದ ಬೆಹಲ ಪರ್ಣಶ್ರೀಯಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಘಟನೆ ವಿವರ: ಮೃತ ಶಿಕ್ಷಕಿಯ ಗಂಡ ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಬಾಗಿಲು ತೆಗೆದು ಇರುವುದನ್ನು ಗಮನಿಸಿದ್ದಾರೆ. ಸುತ್ತ ನೋಡುವಷ್ಟರಲ್ಲಿ ಶಾಲಾ ಸಮವಸ್ತ್ರದಲ್ಲೇ ಕುತ್ತಿಗೆಗೆ ಟೈ ಸುತ್ತಿದ ರೀತಿಯಲ್ಲಿ ಮಗ ಬಿದ್ದಿರುವುದನ್ನು ನೋಡಿದ್ದಾರೆ. ಅಲ್ಲೆ ನೆಲದಲ್ಲಿ ತನ್ನ ಹೆಂಡತಿಯ ಮೃತ ದೇಹವನ್ನು ಸಹ ಕಂಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು 

ಸೋಮವಾರ ಸಂಜೆ  5 ಗಂಟೆ ಸುಮಾರಿಗೆ ಅಂತಕರು ಮನೆಗೆ ನುಸುಳಿ, ಬಾಗಿಲು ಮುಚ್ಚಿ, ದೀಪ ಆರಿಸಿ ಈ ಕೃತ್ಯವನ್ನು ಎಸಗಿರಬಹುದು ಎಂದು ಮೆಲ್ನೋಟಕ್ಕೆ ತಿಳಿದುಬಂದಿದೆ. ಅಡುಗೆ ಮನೆಯಲ್ಲಿ ಕೊಲೆ ಮಾಡಿ ಹೊರ ತಂದು ಹಾಕಿದ್ದಾರೆಂದು ಅಂದಾಜಿಸಲಾಗಿದ್ದು, ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನ ಸೇರಿ ಈ ಇಬ್ಬರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ಸತ್ಯ ಹೊರಬರಲಿದೆ. ಇದನ್ನೂ ಓದಿ: ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

Comments

Leave a Reply

Your email address will not be published. Required fields are marked *