ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್

ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶದಿಂದ ನಾವು ಗೆಲುವನ್ನು ಸಾಧಿಸುತ್ತಿದ್ದೇವೆ. ಫಲಿತಾಂಶ ನೋಡುತ್ತೀದ್ದರೆ ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ? ಎನ್ನುವಂತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಫಲಿತಾಂಶದಿಂದ ದೊಡ್ಡಬಳ್ಳಾಪುರ ಗೆದ್ದಿದ್ದೇವೆ. ಬೆಳಗಾವಿ ಸೇರಿ ಎಲ್ಲವೂ ಅದ್ಬುತ ಗೆಲ್ಲುವು ನಮ್ಮದಾಗಿದೆ. ನಮ್ಮ ರಾಜ್ಯಾಧ್ಯಕ್ಷ 4 ಕರೆ ಮಾಡಿದ್ದರು. ಇಂದು ಮಧ್ಯಾಹ್ನ ಸಭೆ ಮಾಡುತ್ತೇವೆ. ಗಡಿಭಾಗದಲ್ಲೂ ಬಿಜೆಪಿ ವಿಜಯ ಬಾವುಟ ಹಾರಿಸಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಸೋಲನ್ನ ನಾವು ಒಪ್ಪಿಕೊಳ್ತೇವೆ: ಡಿಕೆಶಿ

ಜೆಡಿಎಸ್ ಬಿ ಟೀಂ ಅಂತ ಹೇಳಿದ್ದವರು ಈಗ ಅವರು ಅವರ ಮನೆ ಬಾಗಿಲಿಗೆ ಹೋಗಿದ್ದಾರೆ. ಈಗ ಜಾತಿ, ಧರ್ಮ ಒಡೆಯುವ ಕೆಲಸ ಮಾಡದಿದಕ್ಕೆ ಮನೆ ಕಡೆ ಹೋಗುತ್ತಿದ್ದಾರೆ. ಹೀಗೆ ಮಾಡಿದರೆ ಎಲ್ಲವೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಮುಳುವಾಗಲಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಪಾಕಿಸ್ತಾನದ ಪಂಜಶೀರ್ ವಶಪಡಿಸಿಕೊಂಡ ತಾಲಿಬಾನ್

ಬೆಳಗಾವಿ, ಹುಬ್ಬಳಿ – ಧಾರವಾಡ ಬಿಜೆಪಿಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಕಿಕೊಟ್ಟ ಮಾರ್ಗದರ್ಶನ ಇದಾಗಿದೆ. ಜನ ಮತದಾನ ಮಾಡುವ ಮೂಲಕವಾಗಿ ಬೊಮ್ಮಾಯಿ ಸರ್ಕಾರಕ್ಕೆ ಎಂದಿದ್ದಾರೆ. ಬೊಮ್ಮಾಯಿ ಮುಂದುವರೆಯಲಿ ಎಂದು ಜನರು ಮತದಾನವನ್ನು ಹಾಕಿದ್ದಾರೆ. ಕಾಂಗ್ರೆಸ್ ಮನೆ ಕಡೆ ಹೋಗಿ ಎಂದು ವ್ಯಂಗ್ತವಾಡಿದ್ದಾರೆ.

Comments

Leave a Reply

Your email address will not be published. Required fields are marked *