ಕಾಂಗ್ರೆಸ್ ಮಗನಾಗಲು ಬಿಜೆಪಿ ಅನ್ ಫಿಟ್: ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಕಾಂಗ್ರೆಸ್ ಪಕ್ಷ ಅಪ್ಪ ಎನ್ನುವಂತೆ ಬಿಜೆಪಿ ಸಂಸದರು ಹೇಳಿದ್ದಾರೆ. ಆದರೆ ಬಿಜೆಪಿಯವರಿಗೆ ಕಾಂಗ್ರೆಸ್‍ನ ಮಗನಾಗಲೂ ಯೋಗ್ಯತೆ ಇಲ್ಲ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹರಿಹಾಯ್ದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆ ಕುರಿತು ಉತ್ತರಿಸುವ ಸಂದರ್ಭದಲ್ಲಿ ಅಪ್ಪ ಮಾಡಿದ ಸಾಲ ಮಗ ತೀರಿಸಬೇಕೆಂದು ಬಿಜೆಪಿ ಸಂಸದರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅಪ್ಪ ಇದ್ದಂತೆ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎಂದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿರುವ ಸಾಲ ತೀರಿಸಬೇಕು, ಅಪ್ಪ ಮಾಡಿದ ಸಾಲವನ್ನು ಮಗ ತೀರಸಬೇಕು. ಹೀಗಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಇತ್ತೀಚಿಗೆ ಇತ್ತೀಚೆಗೆ ಸಂಸದ ಸಂಗಣ್ಣ ಕರಡಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ಹಿಂದಿನ 63 ವರ್ಷದಲ್ಲಿ 57 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈಗಿನ ಮೋದಿ ಸರಕಾರ 7 ವರ್ಷದಲ್ಲಿ 82 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಲೈವಿ ರಿಲೀಸ್‍ಗೂ ಮುನ್ನ ಜಯಲಲಿತಾ ಸಮಾಧಿಗೆ ಕಂಗನಾ ಭೇಟಿ

ಬಿಜೆಪಿ ಸರ್ಕಾರ ಕೇವಲ ಕೋಮು ಭಾವನೆ ಕೆರಳಿಸಿ, ಕಾರ್ಪೋರೆಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿವೆ ಎಂದರು.

ಗಣೇಶ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕು. ಕೊರೊನಾ ಎರಡನೆಯ ಅಲೆಗೆ ಉಪಚುನಾವಣೆ, ಜನಾಶೀರ್ವಾದ ಯಾತ್ರೆಗಳೇ ಕಾರಣ ಈ ಆಧಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಕೊಪ್ಪಳ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಗಿಣಗೆರೆಯಿಂದ ಚಿಕ್ಕಬಗನಾಳದವರೆಗೆ ಕಾರ್ಖಾನೆಗಳಿಂದ ರಸ್ತೆ ಮಾಡಿಸಲಾಗುವುದು ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

Comments

Leave a Reply

Your email address will not be published. Required fields are marked *