ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕಟೀಲ್

ಧಾರವಾಡ: ಗಣೇಶೋತ್ಸವಕ್ಕೆ ಈಗಾಗಲೇ ಕೌಂಟ್‍ಡೌನ್ ಶುರುವಾಗಿದೆ. ಈ ನಡುವೆ ಸರ್ಕಾರ ಗಣೇಶೋತ್ಸವ ಎಲ್ಲಿ ರದ್ದು ಮಾಡಿದೆ ಎಂದು ಎಂದು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಕೆಲ ನಿಯಮ ಇವೆ. ಆಚರಣೆಗಿಂತ ಜನರ ಪ್ರಾಣ ಮುಖ್ಯ ಎಂದರು. ಮಹಾರಾಷ್ಟ್ರ, ಕೇರಳ ಹಾಗೂ ನಮ್ಮ ರಾಜ್ಯಕ್ಕೂ ವ್ಯತ್ಯಾಸ ಇದೆ. ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಏರುತ್ತಿವೆ. ಬೇರೆ ರಾಜ್ಯದ ಗೈಡ್‍ಲೈನ್ಸ್ ನಮಗೆ ಇರಲ್ಲ. ಆಯಾ ರಾಜ್ಯದ ಕೊರೊನಾ ಕೇಸ್ ಮೇಲೆ ನಿರ್ಣಯ ಕೈಗೊಳ್ಳಬೇಕು, ಡಬ್ಲೂಎಚ್‍ಒ ನಿಯಮ ಪಾಲನೆ ಮಾಡಬೇಕು. ರಾಜ್ಯ ಸರ್ಕಾರ ಗಣೇಶೋತ್ಸವ ಮಾಡೇ ಮಾಡುತ್ತದೆ. ಆದರೆ ಹೇಗೆ ಮಾಡಬೇಕು ಎಂದು ನಿರ್ಣಯ ಆಗಲಿದೆ ಎಂದಿದ್ದಾರೆ. ಇನ್ನು ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳುತಿದ್ದಂತೆಯೇ ಕಟೀಲ್ ಸಿಟ್ಟಿನಿಂದ ಎದ್ದು ಹೋಗಿದ್ದಾರೆ. ಇದನ್ನೂ ಓದಿ:ನಂದಿಬೆಟ್ಟದಿಂದ ಮರಳುತ್ತಿದ್ದಾಗ ಯುವಕ, ಯುವತಿಯನ್ನು ಅಡ್ಡಗಟ್ಟಿ ಸುಲಿಗೆ

nalin kumar kateel

ಕಳೆದ ವರ್ಷ ಕೊರೊನಾ ಸೋಂಕಿನಿಂದ ಗಣೇಶ ಹಬ್ಬದ ಸಂಭ್ರಮಕ್ಕೆ ಸರ್ಕಾರ ಎಲ್ಲೆಡೆ ಬ್ರೇಕ್ ಹಾಕಿತ್ತು. ಈ ಬಾರಿ ಹಿಂದೂ ಸಂಘಟನೆಗಳ ಜೊತೆ ಬಿಜೆಪಿ ನಾಯಕರೇ ಗಣೇಶೋತ್ಸವ ಆಚರಣೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ. ಹೀಗಾಗಿ ಯಾವ ರೀತಿಯಲ್ಲಿ ಗಣೇಶೋತ್ಸವ ಅಚರಣೆಗೆ ಸರ್ಕಾರ ಅನುಮತಿ ನೀಡಲಿದೆ ಎಂಬ ಕುತೂಹಲ ಈಗ ಮೂಡಿದೆ. ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿ ಕಾಂಗ್ರೆಸ್ಸಿಗರನ್ನು ಕಾಯುವ ಕಾವಲುಗಾರರು: ನಳಿನ್ ಕುಮಾರ್ ಕಟೀಲ್

Comments

Leave a Reply

Your email address will not be published. Required fields are marked *