ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ

ಬೀಜಿಂಗ್: ತೆರಿಗೆ ವಂಚನೆ ಎಸಗಿದ್ದಕ್ಕೆ ಚೀನಾದ ಖ್ಯಾತ ನಟಿಗೆ 299 ದಶಲಕ್ಷ ಯುವಾನ್(340 ಕೋಟಿ ರೂ.) ದಂಡವನ್ನು ವಿಧಿಸಲಾಗಿದೆ.

2019-20ರ ಅವಧಿಯಲ್ಲಿ ತೆರಿಗೆ ಉಲ್ಲಂಘಿಸಿದ್ದಕ್ಕೆ 30 ವರ್ಷ ನಟಿ ಜೆಂಗ್ ಶುವಾಂಗ್‍ಗೆ ಶಾಂಘೈಯ ತೆರಿಗೆ ಅಧಿಕಾರಿಗಳು 299 ದಶಲಕ್ಷ ಯುವಾನ್ ದಂಡವನ್ನು ವಿಧಿಸಿದ್ದಾರೆ.

ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ಶುವಾಂಗ್ ಭಾರೀ ಮೊತ್ತವನ್ನು ಪಡೆದಿದ್ದರೂ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ವಿಚಾರವನ್ನು ನಟಿಯ ಮಾಜಿ ಗಂಡ ಬಹಿರಂಗ ಪಡಿಸಿದ ಬೆನ್ನಲ್ಲೇ ತನಿಖೆ ನಡೆಸಿದ ಅಧಿಕಾರಿಗಳು ಭಾರೀ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ.

2009ರಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ನಂತರ ಚೀನಾದ ಮನೆ ಮಾತಾಗಿದ್ದರು. ದಂಡ ಹಾಕಿದ ಬೆನ್ನಲ್ಲೇ ಚೀನಾ ಅಧಿಕಾರಿಗಳು ಎಲ್ಲಾ ನಿರ್ಮಾಪಕರಿಗೆ ಇನ್ನು ಮುಂದೆ ಸಿನಿಮಾ, ಧಾರಾವಾಹಿಗಳಲ್ಲಿ ಜೆಂಗ್ ಅವರಿಗೆ ಯಾವುದೇ ಅವಕಾಶ ನೀಡಬೇಡಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

ಚೀನಾದ ಪ್ರಮುಖ ಟಿವಿ ಸರಣಿಯಲ್ಲಿ ಜೆಂಗ್ ಹೆಸರನ್ನು ತೆಗೆಯಲಾಗಿದ್ದು, ಪ್ರಮುಖ ಸಾಮಾಜಿಕ ಜಾಲತಾಣ ವಿಬೋದಲ್ಲಿದ್ದ ಖಾತೆಯನ್ನೇ ತೆಗೆದು ಹಾಕಲಾಗಿದೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ಶತಕೋಟ್ಯಧಿಪತಿ ಜಾಕ್ ಮಾ ಕೊನೆಗೂ ಪ್ರತ್ಯಕ್ಷ

ಚೀನಾದ ಸೈಬರ್ ನಿಯಂತ್ರಕ ಶುಕ್ರವಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಸೆಲೆಬ್ರಿಟಿಗಳ ಶ್ರೇಯಾಂಕ ಪಟ್ಟಿಗಳನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೇ ಸೆಲೆಬ್ರಿಟಿ ಫ್ಯಾನ್ ಕ್ಲಬ್ ಮತ್ತು ಮ್ಯಾನೇಜ್‍ಮೆಂಟ್ ಏಜೆನ್ಸಿಗಳ ಮೇಲೂ ಬಿಗಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ.

Comments

Leave a Reply

Your email address will not be published. Required fields are marked *