ಧಾರವಾಡ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಡಳಿತಾತ್ಮಕವಾಗಿ ಯಾವುದೇ ಅಡೆತಡೆ ಇರುವುದಿಲ್ಲ ಹಾಗೂ ಕಲಿಕೆಗೆ ಮುಕ್ತ ಸ್ವಾತಂತ್ರ್ಯ ಇದ್ದು, ಇಡೀ ನೀತಿಯಲ್ಲಿ ಸಂಶಯ ಪಡುವಂತದ್ದೂ ಏನೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ #NEP2020 ಕುರಿತು ಸಾಹಿತಿಗಳ ಜತೆ ಸಂವಾದ ನಡೆಸಿದೆ.
ಸಾಹಿತಿಗಳಿಗಿದ್ದ ಅನೇಕ ಸಂದೇಹಗಳನ್ನು ಪರಿಹರಿಸಿ ಕನ್ನಡ ಭಾಷೆ, ಸಂಶೋಧನೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿದೆವು.
ಇಂತಹ ನೀತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿದ್ದು, ಪ್ರತಿ 10 ವರ್ಷಕ್ಕೊಮ್ಮೆ ಶಿಕ್ಷಣ ನೀತಿ ಬದಲಾಗಬೇಕು ಎಂದು ಸಲಹೆ ನೀಡಿದರು. pic.twitter.com/saEnIsFWzX
— Dr. Ashwathnarayan C. N. (@drashwathcn) August 21, 2021
ಧಾರವಾಡದಲ್ಲಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯ ಮೂಲಕ ರಾಜ್ಯವೂ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ, ಜಾಗತಿಕ ಅವಕಾಶಗಳಲ್ಲಿ ಇರುವ ಪೈಪೋಟಿ ಎದುರಿಸಲು ನಮ್ಮ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುತ್ತದೆ ಎಂದರು. ಇದನ್ನೂ ಓದಿ: ಆದೇಶಕ್ಕೆ ಕ್ಯಾರೇ ಎನ್ನದ ಎಸ್‍ಪಿ ಮೇಲೆ ಸಿಎಂ ಗರಂ
#NEP2020 ಅನುಷ್ಠಾನ ಕುರಿತು ಶಿಕ್ಷಣ ಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅಲ್ಲಿನ ಪ್ರಾಚಾರ್ಯರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದೆ. 3 ಜಿಲ್ಲೆಗಳ 66 ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಎಲ್ಲರ ಸಹಕಾರ, ಸಹಯೋಗದೊಂದಿಗೆ ಮುಂದಡಿಯಿಡುತ್ತಿದ್ದೇವೆ. pic.twitter.com/seaQt0d31p
— Dr. Ashwathnarayan C. N. (@drashwathcn) August 21, 2021
ಶಿಕ್ಷಣ ನೀತಿಯೂ ಗುಣಮಟ್ಟದ ಕಲಿಕೆ ಹಾಗೂ ಗುಣಮಟ್ಟದ ಬೋಧನೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆಯೇ ವಿನಾ ಹಳೆಯ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿದ್ದಂತೆ ರೆಡ್ ಟೇಪಿಸಂ ಇತ್ಯಾದಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. 38 ವರ್ಷಗಳ ನಂತರ ಜಾರಿಗೆ ಬಂದಿರುವ ಈ ಶಿಕ್ಷಣ ನೀತಿಯನ್ನು ಕರ್ನಾಟಕ ಇಡೀ ದೇಶದಲ್ಲೇ ಎಲ್ಲರಿಗಿಂತ ಮೊದಲು ಜಾರಿ ಮಾಡುತ್ತಿದೆ. ನೀತಿಯ ಜಾರಿಗೆ ಸಮುದಾಯ ಮಟ್ಟದ ಬೆಂಬಲ-ಸಹಕಾರ ಅಗತ್ಯವಾಗಿದೆ, ಇಂಥ ಸಹಕಾರವನ್ನು ಸಮಾಜದ ಬುದ್ಧಿಜೀವಿಗಳು, ತಜ್ಞರು ಕ್ರೋಢೀಕರಣ ಮಾಡಬೇಕಿದೆ ಎಂದು ಸಚಿವರು ಕರೆ ನೀಡಿದರು.

Leave a Reply