ವಿಜಯಪುರ: ತಾವು ಮಾಡಿದ ಆದೇಶಕ್ಕೆ ಕಿಮ್ಮತ್ತು ನೀಡದ ಕಾರಣ ಸಿಎಂ ಇಂದು ಎಸ್ಪಿ ಮೇಲೆ ಗರಂ ಆದ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲಬಾಹ್ದೂರು ಶಾಸ್ತ್ರೀ ಜಲಾಶಯಕ್ಕೆ ಬಾಗೀನ ಅರ್ಪಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದರು. ಹೆಲಿಕಾಪ್ಟರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಸಿಎಂಗೆ ಗೌರವ ವಂದನೆ ಕೊಡಲು ಸಿದ್ಧವಾಗಿದ್ದರು. ಇದನ್ನೂ ಓದಿ: ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ: ಬೊಮ್ಮಾಯಿ ಆದೇಶ

ಇದನ್ನ ನೋಡುತ್ತಿದ್ದಂತೆ ವಿಜಯಪುರ ಎಸ್ಪಿ ಆನಂದ್ ಕುಮಾರ್ ಮೇಲೆ ಸಿಎಂ ಗರಂ ಆಗಿದ್ದಾರೆ. ಇದು ಸರಿಯಲ್ಲ, ಇದರ ಬಗ್ಗೆ ನಾನು ಕ್ಲಿಯರ್ ಆಗಿ ಸೂಚನೆ ನೀಡಿದ್ದೇನೆ. ಅದಾದ ಮೇಲೂ ಇದನ್ನ ಮಾಡೋದು ಸರಿಯಲ್ಲ. ನಿಮ್ಮ ಜ್ಯೂನಿಯರ್ಸ್ಗಳಿಗೆ ಹೇಳಬೇಕಿತ್ತು ಎಂದು ಎಸ್ಪಿ ಮೇಲೆ ಸಿಎಂ ಆಕ್ರೋಶ ಹೊರಹಾಕಿದ್ದಾರೆ.

Leave a Reply