ಚಿತ್ರೀಕರಣ ಸೆಟ್‍ಗೆ ಆಟೋದಲ್ಲಿ ಬಂದ ಬಾಲಿವುಡ್ ನಟಿ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಚಿತ್ರೀಕರಣಕ್ಕೆ ಆಟೋದಲ್ಲಿ ಬಂದು ಸುದ್ದಿಯಾಗಿದ್ದಾರೆ. ಆದರೆ ಇದಕ್ಕೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಲಿಯಾ ಭಟ್ ಆಟೋ ರಿಕ್ಷಾದಲ್ಲಿ ಬಂದು ಮುಂಬೈನ ವರ್ಸೋವಾ ಜೊಟ್ಟಿಗೆ ಭೇಟಿ ನೀಡಿದ್ದಾರೆ. ಆಲಿಯಾ ಆಟೋದಿಂದ ಕೆಳಗಿಳಿಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬಿಳಿ ಬಣ್ಣದ ಟಾಪ್, ನೀನ್ಸ್ ಧರಿಸಿ ಆಲಿಯಾ ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಆಟೋದಿಂದಿಳಿದು ಸೆಟ್‍ಗೆ ತೆರಳುವಾಗ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಅದರಲ್ಲಿ ಆಲಿಯಾ ಸಾಮಾನ್ಯರಂತೆ ಹೆಜ್ಜೆಹಾಕಿದ್ದಾರೆ. ಇದು ನೆಟ್ಟಿಗರ ಮನಗೆದ್ದಿದೆ.  ಇದನ್ನೂ ಓದಿ: ಗ್ರಾಮೀಣ ಜನರ ನೆರವಿಗೆ ನಿಂತ ಸಿದ್ದಾರ್ಥ ಆಸ್ಪತ್ರೆ- 30 ಸೆಕೆಂಡಿನಲ್ಲಿ ಕೋವಿಡ್ ದೃಢಪಡಿಸುವ ಯಂತ್ರ ಲೋಕಾರ್ಪಣೆ

 

View this post on Instagram

 

A post shared by Manav Manglani (@manav.manglani)

ಕೆಲವರಿಗೆ ಆಲಿಯಾ ನಡೆ ತೀರಾ ಅಚ್ಚರಿ ಮೂಡಿಸಿಲ್ಲ. ಒಬ್ಬರಂತೂ, ಎಷ್ಟೇ ದೊಡ್ಡವರಾದರೂ, ಎಲ್ಲರೂ ಆಟೊದಲ್ಲಿ ಪ್ರಯಾಣಿಸಬಹುದು. ಅದೇನು ದೊಡ್ಡ ವಿಷಯವಲ್ಲಎಂದು ಕುಟುಕಿದ್ದಾರೆ. ಮತ್ತೊಬ್ಬರು, ಬಾಲಿವುಡ್‍ನ ಅತ್ಯಂತ ಬ್ಯುಸಿ ನಟಿಯನ್ನು ಹೊತ್ತುತಂದ ಆಟೋ ಡ್ರೈವರ್‍ನ ಅದೃಷ್ಟವನ್ನು ಕೊಂಡಾಡಿದ್ದಾರೆ. ಹೀಗೆ ಆಲಿಯಾ ಅಭಿಮಾನಿಗಳಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ಖುಷಿ ಪಟ್ಟರೆ ಇನ್ನು ಹಲವರು ಇದೇನು ದೊಡ್ಡ ವಿಚಾರ ಅಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

 

View this post on Instagram

 

A post shared by Manav Manglani (@manav.manglani)

 

Comments

Leave a Reply

Your email address will not be published. Required fields are marked *