ಹಾಸನ: ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಗಳಲ್ಲ. ಹಾಗಾಗಿ ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತಿದ್ದಾರೆ ಎಂದು ಸರ್ಕಾರ ಪೂರ್ಣಾವಧಿ ಪೂರೈಸಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸಂಸತ್ನಲ್ಲಿ ಮೊದಲಬಾರಿಗೆ ನಮ್ಮ ಪರಿಚಯ ಮಾಡಿಕೊಡಲು ವಿರೋಧ ಪಕ್ಷ ಬಿಡಲಿಲ್ಲ. ಇದೊಂದು ಕಪ್ಪು ಚುಕ್ಕೆ. ಹೀಗಾಗಿ ಜನರ ಮುಂದೆ ಹೋಗಿ ಜನಾರ್ಶಿವಾದ ಯಾತ್ರೆ ಮಾಡುತ್ತಿದ್ದೇವೆ. ಹಾಸನ ಜಿಲ್ಲೆ ದೊಡ್ಡ ಪ್ರಮಾಣದ ರೈತರಿರುವ ಜಿಲ್ಲೆ. ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಪ್ರತಿ ಜಿಲ್ಲೆಯ ರೈತರಿಗೂ ಸಮಸ್ಯೆ ಇದೆ. ಆಯಾ ಭಾಗಕ್ಕೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಮಧ್ಯವರ್ತಿಗಳಿಂದ ರೈತರಿಗೆ ಮೋಸ ಆಗುತ್ತಿತ್ತು. ಇದರಿಂದ ರೈತರಿಗೆ ಅನುಕೂಲ ಆಗಲಿ ಎಂದು ಕೃಷಿ ಕಾಯ್ದೆ ಜಾರಿಗೆ ತಂದಿದ್ದೇವೆ. ನರೇಂದ್ರ ಮೋದಿಯವರ ಎಲ್ಲ ಯೋಜನೆಗಳಿಗೆ ಅವರ ಹೆಸರಿಟ್ಟುಕೊಂಡವರು ಸಿದ್ದರಾಮಯ್ಯ. ದುಡ್ಡು ಮೋದಿಯವರದ್ದು, ಅನ್ನಭಾಗ್ಯ ಎಂಬ ರೀತಿಯ ಹೆಸರು ಸಿದ್ದರಾಮಯ್ಯನವರದು ಎಂದು ಕಿಡಿಕಾರಿದ್ದಾರೆ. ಮೇಕೆದಾಟು ಯೋಜನೆ ಮಾಡಿದ್ರೆ ನಮಗೂ ಲಾಭ ಆಗುತ್ತೆ. ತಮಿಳುಮಾಡಿನವರಿಗೂ ಲಾಭ ಆಗುತ್ತೆ. ಇದಕ್ಕೆ ವಿರೋಧ ಮಾಡುವವರ ಜೊತೆ ಕುಳಿತು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 60 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಮೋದಿ ಅವಧಿಯಲ್ಲಿ ನಡೆದಿದೆ: ರಾಜೀವ್ ಚಂದ್ರಶೇಖರ್
ನಂತರ ಹಾಸನದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ವಿಧಿಸಿರುವ ಕೋವಿಡ್ ನಿಯಮ ಗಾಳಿಗೆ ತೂರಿ ಹೆಚ್ಚಿನ ಜನ ಸೇರಿ ಸಭೆ ನಡೆಸಿದ್ದು ಕಂಡು ಬಂತು. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಕುಳಿತಿದ್ದ ಸಚಿವರಾದ ಶೋಭಕರಂದ್ಲಾಜೆ, ಗೋಪಾಲಯ್ಯ ಸೇರಿದಂತೆ ಯಾರೊಬ್ಬರು ಮಾಸ್ಕ್ ಧರಿಸಿರಲಿಲ್ಲ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಎದುರೇ ಸಿದ್ದರಾಮಯ್ಯಗೆ ಜೈಕಾರ ಕೂಗಿದ ವ್ಯಕ್ತಿ

Leave a Reply