ಕೊರೊನಾ ಮೂರನೇ ಅಲೆ- ತಜ್ಞರ ಸಲಹೆ ಪಾಲಿಸುವಂತೆ ಸಿಎಂಗೆ ಸದಾನಂದಗೌಡ ಸಲಹೆ

ಬೆಂಗಳೂರು: ಕೊರೊನಾ ಮೂರನೇ ಅಲೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಪಾಲಿಸುವಂತೆ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಸಲಹೆಯನ್ನು ನೀಡಿದ್ದಾರೆ.

ಬೆಂಗಳೂರು ಹೊರವಲಯದ ಟಿ.ದಾಸರಹಳ್ಳಿಯಲ್ಲಿ ಮಾತನಾಡಿದ ಡಿ.ವಿ ಸದಾನಂದ ಗೌಡ ಅವರು, ಮುಖ್ಯಮಂತ್ರಿಗಳು ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು, ತಜ್ಞರ ಸಲಹೆಯನ್ನು ಯಾವತ್ತು ಅಲ್ಲಗಳೆಯಬಾರದು, ತಜ್ಞರು ಹೇಳಿದಂತೆ ಮೊದಲನೇ ಹಾಗೂ ಎರಡನೇ ಕೊರೊನಾ ಅಲೆ ನಿಜವಾಗಿದೆ. ಅಪಾರ ಪ್ರಾಣ ಹಾನಿಗಳು ಕೂಡ ಸಂಭವಿಸಿವೆ, ವ್ಯಾಕ್ಸಿನೇಷನ್ ಅನ್ನು ಎಲ್ಲರೂ ಪಡೆದುಕೊಳ್ಳಬೇಕು, ಯಾರು ನಿರ್ಲಕ್ಷ್ಯ ಮಾಡಬಾರದು. ತಜ್ಞರ ಸಲಹೆಗಳಿಗೆ ವಿಶೇಷ ಮನ್ನಣೆ ಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಸದಾನಂದ ಗೌಡರು ಮನವಿ ಮಾಡಿಕೊಂಡರು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಸಿ.ಪಿ ಯೋಗೇಶ್ವರ್ ಮುಖ್ಯಮಂತ್ರಿ ಭೇಟಿ ವಿಚಾರವಾಗಿ ಸದಾನಂದ ಗೌಡ, ಯೋಗೇಶ್ವರ್‍ಗೆ ಟಾಂಗ್ ನೀಡಿದ್ದಾರೆ. ನಮ್ಮ ಸಂವಿಧಾನದಲ್ಲಿ ಶೇ.15 ಮಂತ್ರಿ ಸ್ಥಾನ ಕೊಡಲು ಮಾತ್ರ ಅವಕಾಶವಿದೆ. ಇನ್ನೂ 4 ಮಂತ್ರಿ ಸ್ಥಾನ ಬಾಕಿ ಇದೆ ಅದನ್ನು ನೀಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು, ಯಾರೂ ಹಸ್ತಕ್ಷೇಪ ಮಾಡಬಾರದು ಮುಖ್ಯಮಂತ್ರಿಗಳಿಗೆ ಬೇಕಾದವರನ್ನು ಅವರ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ದಾಸರಹಳ್ಳಿ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಾಜಿ ಶಾಸಕ ಮುನಿರಾಜು, ಲೋಕೇಶ್ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *