– ರಾಜಕಾರಣ ಮಾಡದೇ ಎಲ್ಲಾ ಪಕ್ಷದವರೂ ಒಗ್ಗಟ್ಟಾಗಿ ಎದುರಿಸುತ್ತೇವೆ
ದಾವಣಗೆರೆ: ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದ್ರೆ ಸರ್ಕಾರ ಬಗ್ಗಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿಯುವ ಹಾಗೂ ಜಲ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿ ಇಲ್ಲ. ನಮ್ಮ ರಾಜ್ಯದ ನೀರು ಬಳಕೆ ಮಾಡಲು ಬೇರೆ ರಾಜ್ಯದ ಅಪ್ಪಣೆ ಬೇಕಿಲ್ಲ. ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆ ನಿರಪೇಕ್ಷಣೆಗಾಗಿ ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ತಮಿಳುನಾಡು ಖ್ಯಾತೆ ತೆಗೆಯೋದು ಸರಿಯಲ್ಲ. ನಮ್ಮ ಪಾಲಿನ ನೀರನ್ನು ಕಬಳಿಸುವುದು ಸರಿಯಲ್ಲ, ಕಾನೂನಾತ್ಮಕವಾಗಿ ತಾಂತ್ರಿಕ ಪರಿಣಿತರಿಂದಈ ಪ್ರಕರಣ ಎದುರಿಸುತ್ತೇವೆ. ರಾಜಕಾರಣ ಮಾಡದೇ ಎಲ್ಲಾ ಪಕ್ಷದವರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮೇಕೆದಾಟು ಮಾಡೇ ಮಾಡುತ್ತೇವೆ, ನಾಡಿನ ರಕ್ಷಣೆ ನಮ್ಮ ಹೊಣೆ: ಜಿಎಂ ಸಿದ್ದೇಶ್ವರ್

ಈ ವೇಳೇ ಭ್ರದ್ರ ಮೇಲ್ದಂಡೆ ಕಾಮಗಾರಿ ಚಾಲನೆಯಲ್ಲಿದೆ. ಅದನ್ನು ರಾಷ್ಟ್ರೀಯ ಕಾಮಗಾರಿ ಎಂದು ಘೋಷಣೆ ಮಾಡಲು ತಯಾರಿ ಮಾಡಿಕೊಂಡಿದೆ. ಇನ್ನೊಂದು ಹೈಪವರ್ ಕಮಿಟಿ ಮೀಟಿಂಗ್ ಆಗಬೇಕಿದೆ. ಅದಾದ ನಂತರ ಕೇಂದ್ರ ಸಂಪುಟ ಒಳಪಡುತ್ತದೆ. ಆಗ ನಮ್ಮ ಕೈಸೇರುತ್ತದೆ ಅದೆಲ್ಲ ಬಹಳ ದಿನ ಇಲ್ಲಸಧ್ಯದಲ್ಲೇ ಇದೆ. ಶಾಲೆಗಳ ಪ್ರಾರಂಭದ ಬಗ್ಗೆ ನಮ್ಮ ತಜ್ಞರ ತಂಡ ಇದೆ. ವೈದ್ಯರ ತಂಡ ಇದೆ ಅವರು ನೋಡುತ್ತಾರೆ. ಅವರೆಲ್ಲ ಸೇರಿ ಏನು ನಿರ್ಧಾರ ತಗೋತಾರೆ, ನಂತರ ನಿರ್ಣಯ ಮಾಡುತ್ತೇವೆ ಎಂದಿದ್ದಾರೆ.

Leave a Reply