ಹುಬ್ಬಳ್ಳಿ: ನೂತನ ಸಚಿವ ಸಂಪುಟದಲ್ಲಿ ಪ್ರಬಲ ಖಾತೆಗಾಗಿ ಪೈಪೋಟಿ ಶುರುವಾಗಿದೆ. ವಲಸಿಗ ಸಚಿವರಂತೂ ತಮಗೆ ಇದೇ ಖಾತೆ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಆದರೆ ಎಲ್ಲರೂ ಬಿಟ್ಟಿರುವ ಖಾತೆ ಕೊಟ್ಟರೂ ನಾನು ನಿಭಾಯಿಸುವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ನೂತನವಾಗಿ ಸಚಿವರಾದ ಮೇಲೆ ಕ್ಷೇತ್ರಕ್ಕೂ ತೆರಳುವ ಮುನ್ನ ಸಚಿವ ಶಂಕರಪಾಟೀಲ್, ಮುನೇನಕೊಪ್ಪ ಜೊತೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುರುಗೇಶ್ ನಿರಾಣಿ, ನೂತನವಾಗಿ ಮಂತ್ರಿ ಮಂಡಲ ರಚನೆಯಾಗಿದೆ. ನಾನು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪ ಇಬ್ಬರು ಬರುವ ದಿನಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪರ ನೇತೃತ್ವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇವೆ. ಎಲ್ಲರೂ ಬಿಟ್ಟಿರುವ ಖಾತೆಯನ್ನು ನನಗೆ ಕೊಟ್ಟರೂ ನಾನು ನಿರ್ವಹಿಸುತ್ತೇನೆ ಎಂದು ಹೇಳುವ ಮೂಲಕ ಮುರುಗೇಶ್ ನಿರಾಣಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಪವರ್ ಫುಲ್ ಖಾತೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ರೆಬಲ್ಗಳ ರಹಸ್ಯ ಸಭೆ!

Leave a Reply