ಬೊಮ್ಮಾಯಿ ಕ್ಯಾಬಿನೆಟ್- 29 ಮಂದಿ ಮಂತ್ರಿಗಳಾಗಿ ಪ್ರಮಾಣವಚನ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ  29 ಮಂದಿ ಶಾಸಕರು ಇಂದು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಧ್ಯಾಹ್ನ 2:15ಕ್ಕೆ ನಡೆದ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಇದನ್ನೂ ಓದಿ : ಪಾರ್ಟಿಯಿಂದ ಉಚ್ಛಾಟನೆ ಮಾಡಿದ್ರೂ ಬಿಜೆಪಿಗೇ ವೋಟ್ ಹಾಕೋದು: ಸಿದ್ದು ಸವದಿ

ಮೂರು ದಿನಗಳಿಂದ ದೆಹಲಿಯಲ್ಲಿಯೇ ಉಳಿದುಕೊಂಡಿದ್ದ ಸಿಎಂ ಬೊಮ್ಮಾಯಿ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲರಿಗೂ ಶುಭ ಕೋರಿದರು. ಈ ಬಾರಿ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಗೆ ಬಿಜೆಪಿ ಹೈಕಮಾಂಡ್ ಮುಂದಾಗಿಲ್ಲ. 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ಯಾರಿಗೆ ಮಂತ್ರಿಗಿರಿ?
ಗೋವಿಂದ ಕಾರಜೋಳ(ಮುಧೋಳ), ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ) ಆರ್.ಅಶೋಕ್(ಪದ್ಮನಾಭನಗರ), ಶ್ರೀರಾಮುಲು(ಮೊಳಕಾಲ್ಮೂರು), ಸೋಮಣ್ಣ(ಗೋವಿಂದರಾಜನಗರ) ಉಮೇಶ್ ಕತ್ತಿ(ಹುಕ್ಕೇರಿ), ಅಂಗಾರ(ಸುಳ್ಯ) ಮಧುಸ್ವಾಮಿ(ಚಿಕ್ಕನಾಯಕನಹಳ್ಳಿ), ಅರಗ ಜ್ಞಾನೇಂದ್ರ(ತೀರ್ಥಹಳ್ಳಿ), ಡಾ.ಸಿ.ಎನ್.ಅಶ್ವತ್ಥ ನಾರಾಯಣ(ಮಲ್ಲೇಶ್ವರ), ಸಿಸಿ ಪಾಟೀಲ್(ನರಗುಂದ) ಎಸ್.ಟಿ.ಸೋಮಶೇಖರ್(ಯಶವಂತಪುರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಬೈರತಿ ಬಸವರಾಜ(ಕೆಆರ್ ಪುರಂ), ಮುರುಗೇಶ್ ನಿರಾಣಿ(ಬೀಳಗಿ), ಶಿವರಾಂ ಹೆಬ್ಬಾರ್(ಯಲ್ಲಾಪುರ), ಶಶಿಕಲಾ ಜೊಲ್ಲೆ(ನಿಪ್ಪಾಣಿ), ಕೆಸಿ ನಾರಾಯಣಗೌಡ(ಕೆಆರ್ ಪೇಟೆ), ಸುನೀಲ್ ಕುಮಾರ್(ಕಾರ್ಕಳ), ಮುನಿರತ್ನ(ಆರ್ ಆರ್ ನಗರ), ಎಂಟಿಬಿ ನಾಗರಾಜ್(ಎಂಎಲ್‍ಸಿ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಹಾಲಪ್ಪ ಆಚಾರ್(ಯಲ್ಬುರ್ಗ), ಶಂಕರ್ ಪಾಟೀಲ್ ಮುನೇನಕೊಪ್ಪ(ನವಲುಗುಂದ), ಕೋಟಾ ಶ್ರೀನಿವಾಸ ಪೂಜಾರಿ(ಎಂಎಲ್‍ಸಿ), ಪ್ರಭು ಚೌವ್ಹಾಣ್ (ಔರಾದ್), ಎಸ್ ಅಂಗಾರ(ಸುಳ್ಯ), ಆನಂದ್ ಸಿಂಗ್(ಹೊಸಪೇಟೆ), ಸಿ.ಸಿ.ಪಾಟೀಲ್(ನರಗುಂದ), ಬಿ.ಸಿ.ನಾಗೇಶ್(ತಿಪಟೂರು)

Comments

Leave a Reply

Your email address will not be published. Required fields are marked *