‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

ಗಸ್ಟ್ 20ರಂದು ತೆರೆಗೆ ಬರಲು ಸಜ್ಜಾಗಿರುವ ‘ಗ್ರೂಫಿ’ ಚಿತ್ರದ ಆಡಿಯೋ ಆಗಸ್ಟ್ 5ರಂದು ಬಿಡುಗಡೆಯಾಗುತ್ತಿದೆ. ವಿಜೇತ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿದ್ದು ಆಗಸ್ಟ್ 5ರಂದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ‘ಗ್ರೂಫಿ’ ಆಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ. ಲಹರಿ ಯೂಟ್ಯೂಬ್ ಚಾನಲ್ ನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

‘ಗ್ರೂಫಿ’ ಹೊಸತಂಡದ ಹೊಸ ಪ್ರಯತ್ನವಿರುವ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಸಿನಿಮಾದಲ್ಲಿದೆ. ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಕೆ ಜಿ ಸ್ವಾಮಿ ನಿರ್ಮಿಸಿರುವ ಈ ಚಿತ್ರಕ್ಕೆ ಡಿ. ರವಿ ಅರ್ಜುನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಒಳಗೊಂಡಿರುವ ಈ ಚಿತ್ರಕ್ಕೆ ಲಕ್ಷೀಕಾಂತ್ ಅವರ ಸುಂದರ ಕ್ಯಾಮೆರಾ ನಿರ್ದೇಶನವಿದೆ. ಚಿತ್ರರಸಿಕರಿಗೆ ಸಿನಿಮಾ ಥ್ರಿಲ್ ನೀಡುವುದರ ಜೊತೆ ಉತ್ತಮ ಮನೋರಂಜನೆ ನೀಡಲಿದೆ ಎನ್ನುವ ಚಿತ್ರತಂಡ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ.

ಚಿತ್ರದಲ್ಲಿ ನಾಯಕನಟನಾಗಿ ಆರ್ಯನ್ ಹಾಗೂ ನಾಯಕಿ ಪಾತ್ರದಲ್ಲಿ ಪದ್ಮಶ್ರೀ ಜೈನ್ ನಟಿಸಿದ್ದಾರೆ. ಉಳಿದಂತೆ ಉಮಾ ಮಯೂರಿ, ಗಗನ್, ಪ್ರಜ್ವಲ್, ಸಂಧ್ಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಹಿರಿಯ ಕಲಾವಿದರಾಗಿ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ತಾರಂಗಣದಲ್ಲಿದ್ದಾರೆ. ಮಡಿಕೇರಿಯ ಗಾಳಿಬೀಡು, ಮಲ್ಲಳ್ಳಿ ವಾಟರ್ ಫಾಲ್ಸ್, ಹರಿಹರ, ಸೇರಿದಂತೆ ಹಲವು ಸುಂದರ ಲೋಕೇಷನ್ ಗಳಲ್ಲಿ ಈ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಆಗಸ್ಟ್ 20ರಂದು `ಗ್ರೂಫಿ’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆಗಸ್ಟ್ 5ರಂದು ಆಡಿಯೋ ಬಿಡುಗಡೆ ಮಾಡಲಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರದ ಇಂಟ್ರಸ್ಟಿಂಗ್ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಲಿದೆ.

Comments

Leave a Reply

Your email address will not be published. Required fields are marked *