ನಾನು ಸಚಿವನಾಗಬೇಕೆಂದು ದೆಹಲಿಗೆ ಹೋಗಿಲ್ಲ, ಬೆಂಗ್ಳೂರಲ್ಲಿ ಕೂತು ಲಾಬಿನೂ ಮಾಡಿಲ್ಲ: ರೇಣುಕಾಚಾರ್ಯ

ದಾವಣಗೆರೆ: ಸಂಜೆಯೊಳಗಾಗಿ ಸಚಿವ ಸಂಪುಟದ ಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ, ನಾನು ಸಚಿವನಾಗಬೇಕೆಂದು ದೆಹಲಿಗೂ ಹೋಗಿಲ್ಲ ಬೆಂಗಳೂರಿಗೆ ಹೋಗಿ ಲಾಬಿನೂ ಮಾಡಿಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ದಾವಣಗೆರೆ ಮಧ್ಯಕರ್ನಾಟಕದ ಜಿಲ್ಲೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಐವರು ಶಾಸಕರು ಮನವಿ ಮಾಡಿದ್ದೇವೆ. ಯಾರಿಗೆ ಒಲಿಯುತ್ತೆ ಅದೃಷ್ಟ ಅನ್ನೋದು ಗೊತ್ತಿಲ್ಲ. ನಾನು ಒಂದು ಬಾರಿ ಸಚಿವ ಹಾಗೂ ಎರಡು ನಿಗಮಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದು, ನನಗೆ ಸಚಿವ ಸ್ಥಾನ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ. ಅದಕ್ಕೆ ನಾನು ಸಮರ್ಥಿನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಹಿರಿಯ ಕಿರಿಯರು ಎಂಬ ಬೇಧವಿಲ್ಲ:
ಯಾರು ಜನರ ಜೊತೆಗಿರುತ್ತಾರೋ ಜನರಿಗೆ ಸುಲಭವಾಗಿ ಸಿಗುತ್ತಾರೆ ಅಂತವರಿಗೆ ಬಿಜೆಪಿ ಪಕ್ಷ ಅವಕಾಶ ಕೊಡುತ್ತೆ. ಮೊನ್ನೆ ದೆಹಲಿಗೆ ಹೋದಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವರಿಗೆ ನನ್ನ ಕೆಲಸದ ಮೂಲಕ ನನ್ನನ್ನು ಪರಿಚಯಿಸಿದ್ದಾರೆ. ಅರುಣ್ ಸಿಂಗ್ ಅವರು ನಾನು ಕೋವಿಡ್ ಸಂದರ್ಭದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದ್ದು, ಸಿಎಂ ಹಾಗೂ ವರಿಷ್ಠರಿಗೆ ಪರಮಾಧಿಕಾರ ಇದೆ ಕಾದು ನೋಡಿ ಎಂದರು.

ಇಂದು ಸಂಜೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ:
ಸಿಎಂ ಬೊಮ್ಮಯಿಯವರು ದೆಹಲಿಗೆ ಹೋಗಿದ್ದಾರೆ, ಸಂಜೆ ವಾಪಸ್ ಆಗ್ತಾರೆ. ವರಿಷ್ಠರ ಜೊತೆ ಚರ್ಚಿಸಿ ಇಂದು ಸಂಜೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಯಡಿಯೂರಪ್ಪ ನವರ ಲೀಸ್ಟ್ ನಲ್ಲಿ ನನ್ನ ಹೆಸರು ಹೋಗಿರುವುದು ಗೊತ್ತಿಲ್ಲ. ಬಿಎಸ್ ವೈ ಪಟ್ಟಿಯಲ್ಲಿ ಯಾರನ್ನು ಮಾಡಬೇಡಿ ಎಂದು ತಿಳಿಸಿಲ್ಲ. ಯಡಿಯೂರಪ್ಪ ನವರು ಅರ್ಹತೆ ಇದ್ದವರಿಗೆ ಕೊಡಿ ಎಂದು ಹೇಳುತ್ತಾರೆ. ಅವರು ಇವರನ್ನು ಬಿಡಿ, ಇಂತವರನ್ನು ಸಚಿವರನ್ನು ಮಾಡಿ ಎಂದು ಕೀಳುಮಟ್ಟದ ರಾಜಕಾರಣ ಯಡಿಯೂರಪ್ಪ ನವರು ಮಾಡಲ್ಲ ಎಂದರು. ಇದನ್ನೂ ಓದಿ: ಡಿಸಿಎಂ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ, ಸಚಿವನಾಗುವುದು ನಿಶ್ಚಿತ: ಉಮೇಶ್ ಕತ್ತಿ

ಸಿಎಂ ಬಸವರಾಜ್ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ ಪಡೆದ ವಿಚಾರವಾಗಿ ಮಾತನಾಡಿದ ಅವರು, ಜೆ.ಎಚ್. ಪಟೇಲ್, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ ಸಮಕಾಲಿನ ರಾಜಕಾರಣಿಗಳು, ದೇವೇಗೌಡರು ಕೂಡ ಹಿರಿಯರು, ಅನುಭವಿಗಳು. ಅಲ್ಲದೆ ಬೊಮ್ಮಯಯವರು ದೇವಗೌಡರೊಂದಿಗೆ ಜೊತೆ ಕೆಲಸ ಮಾಡಿದವರು. ಹಿರಿಯರ ಮಾರ್ಗದರ್ಶನ, ಆಶೀರ್ವಾದ ಪಡೆದಿದ್ದಾರೆ. ಅದದಲ್ಲಿ ತಪ್ಪೇನೂ ಇಲ್ಲ. ಅಲ್ಲದೆ ಇದು ಹೊಂದಾಣಿಕೆಯಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಡೆಯನ್ನು ರೇಣುಕಾಚಾರ್ಯ ಸಮರ್ಥಿಸಿಕೊಂಡರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಮ್ಮ ಕ್ಷೇತ್ರದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಯಾರು ಕೂಡ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿಲ್ಲ. ನಿಮ್ಮ ಸಲಹೆಗಳನ್ನು ಸ್ವೀಕಾರ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ನೀಡಿದರು. ಇದನ್ನೂ ಓದಿ: ದೇವೇಗೌಡರು, ಯಡಿಯೂರಪ್ಪ ನನ್ನ ಮೆಚ್ಚಿನ ನಾಯಕರು: ಕೆ.ಎಸ್.ಈಶ್ವರಪ್ಪ

Comments

Leave a Reply

Your email address will not be published. Required fields are marked *