ಗಣಿಗಾರಿಕೆ ವೀಕ್ಷಣೆಗೆ ಜೆಡಿಎಸ್ ಶಾಸಕರು ಬರುವುದಾದರೆ ಸ್ವಾಗತ: ಸುಮಲತಾ

ಮಂಡ್ಯ: ಗಣಿಗಾರಿಕೆ ವೀಕ್ಷಣೆಗೆ ನನ್ನ ಜೊತೆ ಜೆಡಿಎಸ್ ಶಾಸಕರು ಬರುವುದಾದರೆ ಸ್ವಾಗತ, ಅವರ ಕ್ಷೇತ್ರದಲ್ಲಿ ಅವರನ್ನೇ ಕರೆಯಲು ನಾನು ಯಾರು ಎಂದು ಜೆಡಿಎಸ್ ಶಾಸಕರುಗಳಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಇಂದು ರಾಜ್ಯದಲ್ಲಿ 1,913 ಜನಕ್ಕೆ ಕೊರೊನಾ ಸೋಂಕು, 48 ಸಾವು

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ಸ್ಥಳಗಳಿಗೆ ಬರಲು ನಮಗೆ ಆಹ್ವಾನ ನೀಡಿದರೆ ನಾವು ಬೇಕಿದ್ದರೆ ಹೋಗುತ್ತೇವೆ ಎಂದು ಜೆಡಿಎಸ್ ನಾಯಕರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ರೆಡ್ ಕಾರ್ಪೆಟ್ ಹಾಕಿಕೊಂಡು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದವರು ಈಗ ಆಹ್ವಾನ ನೀಡಬೇಕಂತಾ? ಅವರ ಕ್ಷೇತ್ರಕ್ಕೆ ಅವರನ್ನು ಆಹ್ವಾನ ಮಾಡಲು ನಾನು ಯಾರು? ನನ್ನ ಜೊತೆ ಅವರು ಬಂದರೆ ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ದರ್ಶನ್, ಉಮಾಪತಿ

ಅಲ್ಲಿ ಅವರೆ ಶಾಸಕರು ಅಲ್ವಾ, ಅವರ ಕ್ಷೇತ್ರದಲ್ಲಿನ ಗಣಿಗಾರಿಕೆಯನ್ನು ನಿಲ್ಲಿಸಲು ಅವರಿಂದ ಆಗಲ್ವಾ? ಅಕ್ರಮ ಗಣಿಗಾರಿಕೆ ನಿಲ್ಲಿಸೋಕೆ ಅವರು ಹೋರಾಟ ಮಾಡೋಕೆ ಆಗಲ್ವಾ? ನನ್ನ ಹೋರಾಟದಲ್ಲಿ ಅವರು ಭಾಗಿಯಾದರೆ ಸಂತೋಷವಾಗುತ್ತದೆ. ನಮ್ಮ ಕ್ಷೇತ್ರದ ಗಣಿಗಾರಿಕೆಯನ್ನು ಅಕ್ಕ ನಿಲ್ಲಿಸಿಕೊಡಿ ಎಂದು ಸುಮಲತಾಗೆ ಟಾಂಗ್ ನೀಡಿದ ನಾಗಮಂಗಲ ಶಾಸಕ ಸುರೇಶ್‍ಗೌಡ ಅವರಿಗೂ ಸುಮಲತಾ ಅಂಬರೀಶ್ ಉತ್ತರ ನೀಡಿದ್ದಾರೆ.

Comments

Leave a Reply

Your email address will not be published. Required fields are marked *