ಘಮ ಘಮಿಸುವ ಪಾಲಕ್ ಚಿಕನ್ ಕರಿ ನೀವೂ ಮಾಡಿ

ವಾರಾಂತ್ಯದಲ್ಲಿ ಮಾಂಸ ಪ್ರಿಯರಿಗೆ ರುಚಿಯಾಗಿ ಮತ್ತು ಖಾರವಾಗಿ ಏನಾದರೂ ತಿನ್ನಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು ಇಂದು ಮನೆಯಲ್ಲಿ ಘಮ ಘಮ ಘಮಿಸುವ ಪಾಲಕ್ ಚಿಕನ್ ಮಾಡಲು ಇಲ್ಲಿದೆ ಸರಳವಾಗಿ ಮಾಡುವ ವಿಧಾನ. ಇದನ್ನೂ ಓದಿ: ಸಿಹಿಯಾದ ಅಂಜೂರ ಹಲ್ವಾ ನೀವು ಮಾಡಿ

ಬೇಕಾಗುವ ಸಾಮಗ್ರಿಗಳು:

*ಕೋಳಿ ಮಾಂಸ – 1 ಕೆ.ಜಿ
*ಪಾಲಕ್ – 1 ಕಟ್ಟು
*ಈರುಳ್ಳಿ – 1
*ಬೆಳ್ಳುಳ್ಳಿ – 4
*ಅಡುಗೆ ಎಣ್ಣೆ – ಅರ್ಧ ಕಪ್
*ಅರಿಶಿಣ – 1 1 ಟೀ ಸ್ಪೂನ್
*ಖಾರದ ಪುಡಿ – 1 ಟೀ ಸ್ಪೂನ್
*ಜೀರಿಗೆ – 1 ಟೀ ಸ್ಪೂನ್
*ಕೊತ್ತಂಬರಿ – 1 ಟೀ ಸ್ಪೂನ್
*ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಕೋಳಿ ಮಾಂಸವನ್ನು ತೊಳೆದು ಸ್ವಚ್ಛಗೊಳಿಸಬೇಕು.
* ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
* ನಂತರ ಈರುಳ್ಳಿಯನ್ನು ಹಾಕಿ, ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಬೇಕು.

* ಅರಿಶಿಣ, ಖಾರದಪುಡಿ, ಜೀರಿಗೆ, ಕೊತ್ತಂಬರಿ ಹಾಕಿ 2 ನಿಮಿಷ ಬಿಡಿ. ಇದರ ಮೇಲೆ 1 ಕಪ್ ನೀರನ್ನು ಹಾಕಿ ಪೇಸ್ಟ್ ರೀತಿ ಬಾಣಲೆಯಲ್ಲಿ ಕಲಸಿಕೊಳ್ಳಿ.

* ನಂತರ ಕೋಳಿ ಮಾಂಸವನ್ನು ಹಾಕಿ. ಮಾಂಸವು ಮೃದುವಾಗುವವರೆಗೆ ಬೇಯಿಸಿ. ಅಗತ್ಯ ಬಿದ್ದರೆ ನೀರನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.


*  ನಂತರ ಪಾಲಕ್ ಸೇರಿಸಿ ಬೇಯಿಸಿದರೆ ಘಮ ಘಮ ಪಾಲಕ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.

Comments

Leave a Reply

Your email address will not be published. Required fields are marked *