ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

ಚಾಮರಾಜನಗರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವೀರಶೈವ ಸಮಾಜದ ಮುಖಂಡರು, ಸಿಎಂ ಬಿ.ಎಸ್ ಯಡಿಯೂರಪ್ಪ ಅಭಿಮಾನಿಗಳು ಘೆರಾವ್ ಹಾಕಿ ಪ್ರತಿಭಟಿಸಿದ್ದಾರೆ. ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಶಾಸಕರಿಗೆ ನಗರದ ಹರಳುಕೋಟೆ ಆಂಜನೇಯ ದೇವಾಲಯ ಸಮೀಪ ಯಡಿಯೂರಪ್ಪ ಅಭಿಮಾನಿಗಳು ಘೆರಾವ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ, ದೀದಿಗೆ 2,600 ಕೆ.ಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ

ವೀರಶೈವ ಲಿಂಗಾಯತ ಸಮಾಜವನ್ನು 2ಂ ಸೇರಿಸಬೇಕೆಂದು ಒತ್ತಾಯಿಸಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಯತ್ನಾಳ್ ಅವರ ಕಾರಿಗೆ ಮುತ್ತಿಗೆ ಹಾಕಿದ ಲಿಂಗಾಯತ ಸಮಾಜದ ಯುವಕರು, ಮುಖಂಡರುಗಳು ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಎಂ ವಿರುದ್ಧ ಯಾವುದೇ ಹೇಳಿಕೆಗಳನ್ನು ಕೊಡಬಾರದು, ಸಮಯದಾಯ ಒಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.

ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಯತ್ನಾಳ್ ಅವರಿಗೆ ಭದ್ರತೆ ಒದಗಿಸಿದರು.

Comments

Leave a Reply

Your email address will not be published. Required fields are marked *