ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ

ಮಂಡ್ಯ: ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಹೆತ್ತವರು ನಿರ್ಧರಿಸಿದ್ದರಿಂದ ಅವಳಿ ಸಹೋದರಿಯರು ಆತ್ಮಹತ್ಯೆಗೆ ಶರಣಾದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿಲ್ಲ.

ದೀಪಿಕಾ (19) ಮತ್ತು ದಿವ್ಯ(19) ಆತ್ಮಹತ್ಯೆ ಮಾಡಿಕೊಂಡ ಅವಳಿ ಸಹೋದರಿಯರು. ಈ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಬ್ಯಾಕ್ ಲೇಸ್ ಟಾಪ್ ತೊಟ್ಟ ಟಾಲಿವುಡ್ ಬ್ಯೂಟಿ – ಪಡ್ಡೆ ಹುಡ್ಗರ ನಿದ್ದೆ ಕದ್ದ ಸಮಂತಾ

ಅವಳಿ ಸಹೋದರಿಯರು ಮದುವೆಯ ವಯಸ್ಸಿಗೆ ಬಂದಿದ್ದರು. ಹೀಗಾಗಿ ಇಬ್ಬರಿಗೂ ಮದುವೆ ಮಾಡಲು ಹೆತ್ತವರು ತೀರ್ಮಾನಿಸಿದರು. ಅಂತೆಯೇ ಇಬ್ಬರಿಗೂ ಬೇರೆ ಬೇರೆ ಮನೆಯಿಂದ ಮದುವೆಯ ಪ್ರಪೋಸಲ್ಸ್ ಕೂಡ ಬಂದಿತ್ತು. ಹೀಗಾಗಿ ಇಬ್ಬರನ್ನ ಬೇರೆ ಬೇರೆಯಾಗಿ ಮದುವೆ ಮಾಡಿಕೊಡಲು ಅವಳಿ ಸಹೋದರಿಯ ಪೋಷಕರು ತೀರ್ಮಾನಿಸಿದರು.

ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದ ದೀಪಿಕಾ ಹಾಗೂ ದಿವ್ಯಾ ಚಿಕ್ಕಂದಿನಿಂದಲೇ ಅನ್ಯೋನ್ಯತೆಯಿಂದ ಇದ್ದರು. ಆದರೆ ಇದೀಗ ತಮ್ಮನ್ನು ಬೇರೆ ಬೇರೆ ಕಡೆ ಮದುವೆ ಮಾಡಿಕೊಡುತ್ತಾರೆ. ಇದರಿಂದ ನಾವು ಬೇರೆ ಬೇರೆಯಾಗುತ್ತೇವೆ. ಅಲ್ಲದೆ ಈ ಮೂಲಕ ನಮ್ಮ ಬಾಂಧವ್ಯ ಕೂಡ ಕೊನೆಯಾಗುತ್ತದೆ ಎಂದು ನೊಂದ ದೀಪಿಕಾ ಹಾಗೂ ದಿವ್ಯಾ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದು, ಮನೆಯಲ್ಲಿನ ಬೇರೆ ಬೇರೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆನ್ ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲ- ಜಿಲ್ಲೆಗೆ ರ್‍ಯಾಂಕ್ ಪಡೆದ ಬಾಲಕ

ಸದ್ಯ ಕುಟುಂಬಸ್ಥರು ಅವಳಿ ಸಹೋದರಿಯರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಿದ್ದಾರೆ. ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *