‘ಕೊಪ್ಪರಿಗೆ’ ಎಂಬ ಆನ್‍ಲೈನ್ ತುಳು ಶಬ್ದಕೋಶ ಬಿಡುಗಡೆ

ಮಂಗಳೂರು: ತುಳು ಭಾಷೆಯ ಉಳಿವಿಗಾಗಿ ಮತ್ತು ತುಳು ಪದಗಳ ಪುನರ್ ಬಳಕೆಗೆ ಹಾಗೂ ಜನರಿಗೆ ಪರಿಚಯಿಸಲೆಂದು ಶಬ್ದಕೋಶ ಬಿಡುಗಡೆ ಮಾಡಲಾಯಿತ್ತು.

‘ಕೊಪ್ಪರಿಗೆ’ ಎಂಬ ಆನ್‍ಲೈನ್ ತುಳು ಶಬ್ದಕೋಶದ ಬಿಡುಗಡೆ ಸಮಾರಂಭವು ಮಂಗಳೂರಿನ ಊರ್ವ ಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಇಂದು ನಡೆಯಿತು. ಕೊಪ್ಪರಿಗೆ ಆನ್‍ಲೈನ್ ತುಳು ಡಿಕ್ಷನರಿಯನ್ನು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಬಿಜೆಪಿ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಬಿಡುಗಡೆ ಮಾಡಿದರು. ಕೊಪ್ಪರಿಗೆ ಡಿಕ್ಷನರಿಯ ಡೆವೆಲಪರ್ ಸುಮಂತ್ ಪೂಜಾರಿ ಹೆಬ್ರಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್, ಕೊಪ್ಪರಿಗೆ ತುಳು ಶಬ್ದಕೋಶದ ಉಪಯೋಗವೂ ಜಗತ್ತಿನ ಎಲ್ಲಾ ತುಳುವರಿಗೂ ಸಿಗಲಿ. ಈ ಮೂಲಕ ಕೊಪ್ಪರಿಗೆ ತುಳುನಾಡಿನ ಕೊಪ್ಪರಿಗೆ ಯಾಗಲಿ. ತುಳುಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಮಾಡುವ ಸರ್ವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಪಟ್ಲ ಸತೀಶ್ ಶೆಟ್ಟಿ, ಸನಾ ಗ್ರೂಪ್ ಮಾಲಕ ಸಾಗರ್, ಜೈ ತುಳುನಾಡ್ (ರಿ.) ಸಂಘಟನೆಯ ಅಧ್ಯಕ್ಷ ಸುದರ್ಶನ ಸುರತ್ಕಲ್, ಕೊಪ್ಪರಿಗೆ ಡಿಕ್ಷನರಿಯ ಡೆವೆಲಪರ್ ಸುಮಂತ್ ಪೂಜಾರಿ ಹೆಬ್ರಿ ಉಪಸ್ಥಿತರಿದ್ದರು. ಅರುಣ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.

Comments

Leave a Reply

Your email address will not be published. Required fields are marked *