ಕಡಿಮೆ ಬೆಲೆ, ಭರ್ಜರಿ ಆಫರ್ – ಅಜಿಯೋದಲ್ಲಿ ಜು.5ರವರೆಗೆ ಬಿಗ್ ಬೋಲ್ಡ್ ಸೇಲ್‍

ಬೆಂಗಳೂರು: ಹೊಸ ಸ್ಟೈಲ್ಸ್ ಮತ್ತು ಅತ್ಯಾಕರ್ಷಕ ಫ್ಯಾಶನ್ ಬಟ್ಟೆಗಳಿಗೆ ಹೆಸರುವಾಸಿಯಾದ ಭಾರತದ ಪ್ರಮುಖ ಆನ್‍ಲೈನ್ ಶಾಪಿಂಗ್ ತಾಣ www.ajio.com ಜುಲೈ 1 ರಿಂದ 5 ರವರೆಗೆ ಅದರ ಬಿಗ್ ಬೋಲ್ಡ್ ಸೇಲ್‍ನಲ್ಲಿ ಶಾಪಿಂಗ್ ಹಬ್ಬವನ್ನು ಆಯೋಜಿಸಿದೆ.

ತನ್ನ ಬಿಗ್ ಬೋಲ್ಡ್ ಸೇಲ್ ನಲ್ಲಿ 2,500ಕ್ಕೂ ಹೆಚ್ಚು ಬ್ರಾಂಡ್, 6 ಲಕ್ಷಕ್ಕೂ ಅಧಿಕ ಸ್ಟೈಲ್‍ಗಳನ್ನು ಒಳಗೊಂಡಿರುವ ವಿಶಾಲವಾದ ಕ್ಯಾಟಲಾಗ್‍ನಲ್ಲಿ ಶೇ.50-90 ರಿಯಾಯಿತಿಯನ್ನು ಅಜಿಯೋ ನೀಡಿದೆ. ಕಡಿಮೆ ಬೆಲೆಗಳೊಂದಿಗೆ ಹಿಂದೆಂದೂ ಕೇಳಿರದ ಆಫರ್ ಗಳು ಪ್ರತೀ ಗಂಟೆಯ ವಿಶೇಷ ಡೀಲ್‍ಗಳು, ರಿವಾರ್ಡ್‍ಗಳು ಮತ್ತು ಪಾಯಿಂಟ್‍ಗಳು ಗ್ರಾಹಕರಿಗೆ ಸಿಗಲಿದೆ.

ವಿಶ್ವದ ಅತ್ಯಂತ ಜನಪ್ರಿಯ ಬ್ರಾಂಡ್‍ಗಳಾದ ನೈಕ್, ಪೂಮಾ, ಅಡೀಡಾಸ್, ಲೆವಿಸ್, ಯುನೈಟೆಡ್ ಕಲರ್ಸ್ ಆಫ್ ಬೆನೆಟನ್ ಸೇರಿದಂತೆ ಇತರ ಬ್ರಾಂಡ್‍ಗಳ ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯವಿದೆ. ಇದನ್ನೂ ಓದಿ :ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

ನಟಿ ಸೋನಮ್ ಕಪೂರ್, ಜನಪ್ರಿಯ ತಾರೆಗಳಾದ ಗುರು ರಾಂಧ್ವಾ, ಶ್ರುತಿ ಹಾಸನ್, ಕಾಜಲ್ ಅಗರ್‍ವಾಲ್ ಮತ್ತು ಮೌನಿ ರಾಯ್ ಅವರನ್ನು ಕಂಪನಿ ತನ್ನ ಫ್ಯಾಶನ್ ರಾಯಭಾರಿಯನ್ನಾಗಿ ಮಾಡಿದೆ.

ಜನಪ್ರಿಯ ವಿಭಾಗಗಳಾದ ಟೀ ಶರ್ಟ್‍ಗಳು, ಜೀನ್ಸ್, ಕುರ್ತಾ ಮತ್ತು ಸ್ನೀಕರ್ ಗಳಲ್ಲಿ  ಸಾಟಿಯಿಲ್ಲದ ಡೀಲ್‍ಗಳನ್ನು  ನೋಡಬಹುದು.

Comments

Leave a Reply

Your email address will not be published. Required fields are marked *