ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರದ ಟೈಟಲ್ ಘೋಷಣೆಯಾಗಿದೆ. ಟೈಟಲ್ ಜೊತೆ ಚಿತ್ರತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ. ವಿಶೇಷ ಶೀರ್ಷಿಕೆಯಿಂದಲೇ ಗಾಂಧಿನಗರದಲ್ಲಿ ದ್ವಿತ್ವ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ ಟೈಟಲ್ ಬಗೆಗಿನ ಕುತೂಹಲ ಹೆಚ್ಚಾಗಿದೆ.

ದ್ವಿತ್ವ ಅಂದ್ರೆ ಎರಡು ಎಂದರ್ಥ. ದ್ವಿ ಪಾತ್ರದಲ್ಲಿ ಅಂದ್ರೆ ಲೂಸಿಯಾ ರೀತಿಯ ಕಥೆಯನ್ನ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಆರಂಭಗೊಂಡಿವೆ. ಚಿತ್ರದ ಡ್ಯೂಯಲ್ ಪರ್ಸನಾಲಿಟಿಯ ಸುಳಿವು ನೀಡುತ್ತಿರುವ ಫಸ್ಟ್ ಲುಕ್ ಈ ಚರ್ಚೆಗಳಿಗೆ ಕಾರಣ. ಸೈಕಲಾಜಿಕಲ್ ಥ್ರಿಲ್ ಕಥೆಯನ್ನು ದ್ವಿತ್ವ ಹೊಂದಿದೆ. ಈ ಹಿಂದೆ ಲೂಸಿಯಾ ಮತ್ತು ಯೂಟರ್ನ್ ಎಂಬ ಅದ್ಭುತ್ ಚಿತ್ರಗಳನ್ನ ನೀಡಿದ ಪವನ್ ಕುಮಾರ್ ನಿರ್ದೇಶನದಲ್ಲಿಯೇ ದ್ವಿತ್ವ ಮೂಡಿ ಬರಲಿದೆ.

ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿರಲಿದೆ. ಇದೇ ಸೆಪ್ಟೆಂಬರ್ ನಲ್ಲಿ ದ್ವಿತ್ವ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

Comments

Leave a Reply

Your email address will not be published. Required fields are marked *